ಶಿಕ್ಷಕ ಮಿತ್ರ ಶಿಕ್ಷಕಸ್ನೇಹಿ ಆಗಿರಲಿ
ಮುಖ್ಯಮಂತ್ರಿಗಳಾದ ಬಿ .ಎಸ್ ಯಡಿಯೂರಪ್ಪ ರವರು ಮಂಡಿಸಿರುವ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ,ಶೇಕಡಾ11 ರಷ್ಟು ಮತ್ತು ಮಕ್ಕಳಿಗೆ ನೀಡಲು ಉದ್ದೇಶಿಸಿರುವ ಇತರೆ ಸವಲತ್ತುಗಳನ್ನು ಸೇರಿ ಶೇಕಡಾ15% ಹಣ ಅಂದರೆ 36000 ಕೋಟಿ ಅನುದಾನವನ್ನು ಮೀಸಲಿಟ್ಡಿರುವುದು ಸ್ವಾಗತಾರ್ಹ. ಈಗಲಾದರೂ ಶಿಕ್ಷಣ ಅತಿ ಆದ್ಯತಾ ವಲಯ ಎಂದು ಪರಿಗಣಿಸಲಾಗಿದೆ. ಇದರ ಜೊತೆಗೆ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕರು ಮೂರು ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಲು ಬಜೆಟ್ ನಲ್ಲಿ ಪ್ರಸ್ತಾಪವನ್ನು ಮಾಡಿದ್ದಾರೆ.ಎಲ್ಲಾ ಶಾಸಕರು ಇದನ್ನು ಅನುಷ್ಠಾನಗೊಳಿಸಬೇಕಿದೆ. ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಬರೀ ಘೋಷಣೆ ಮಾಡಿದರೆ ಸಾಲದು ಅವುಗಳ ಸಮರ್ಪಕವಾದ ಅನುಷ್ಠಾನ ಅಷ್ಟೇ ಮುಖ್ಯ. ಇದರ ಜೊತೆಗೆ ಜಿಲ್ಲೆಯ ಉತ್ತಮ ಸಾಧನೆ ತೋರಿದ ಪರಿಶಿಷ್ಟ ಜಾತಿ ಮತ್ತು ಪಂಗಡದ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಒಂದು ಲಕ್ಷ ಬಹುಮಾನವನ್ನು ಘೋಷಣೆ ಮಾಡಿದೆ .ಇದು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿಸ್ತಾರಿಸಬೇಕಿದೆ.ಶಿಕ್ಷಕರಿಗೆ ಶಿಕ್ಷಕ ಮಿತ್ರ ಆಪ್ ಮಾಡುವ ಪ್ರಸ್ತಾಪವನ್ನು ಮಾಡಲಾಗಿದೆ .ಇದು ಹತ್ತರಲ್ಲಿ ಇನ್ನೊಂದು ಎನ್ನುವಂತಾಗದಿರಲಿ.ಏಕೆಂದರೆ ಈಗಿರುವ ಕೆಲ ಶಿಕ್ಷಣ ಸಂಬಂದಿತ ಸಾಫ್ಟವೇರ್ ಮತ್ತು ವೆಬ್‌ಸೈಟ್ ಗಳಾದ S T S ,TDS ಮುಂತಾದವುಗಳು ಪದೇ ಪದೇ ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ಸಮಸ್ಯೆ ಎದುರಿಸುವುದನ್ನು ನಾವು ಕಾಣಬಹುದು. ಆದ್ದರಿಂದ ಈಗ ಬಿಡುಗಡೆ ಮಾಡಲು ಉದ್ದೇಶಿಸಿರುವ ಶಿಕ್ಷಕ ಮಿತ್ರ ಆಪ್ ವಿಳಂಬವಾದರೂ ಸುಸಜ್ಜಿತವಾದ ದೋಷರಹಿತವಾದ ಮತ್ತು ಶಿಕ್ಷಕಸ್ನೇಹಿಯಾಗಿರಲಿ ಎಂದು ಆಶಿಸೋಣ .
ಸಿ ಜಿ ವೆಂಕಟೇಶ್ವರ
ತುಮಕೂರು
ತುಮಕೂರು
No comments:
Post a Comment