*ಅಂಬಿ ನಿಂಗೆ ವಯಸ್ಸಾಯ್ತೋ*
ಚಿತ್ರ ವಿಮರ್ಶೆ
ಈ ವಾರ ನಾನು ನೋಡಿದ ಕನ್ನಡ ಚಲನಚಿತ್ರ *ಅಂಬಿ ನಿಂಗ್ ವಯಸ್ಸಯ್ತೋ* ಬಹಳ ದಿನಗಳ ನಂತರ ಕುಟುಂಬ ಸಮೇತ ಕುಳಿತುಕೊಂಡು ನೋಡಬಹುದಾದ ಚಿತ್ರ ಬಂದಿದೆ ಅದಕ್ಕೆ ನಿರ್ದೇಶಕರಾದ ಗುರುದತ್ ಗಾಣಿಗ ಅವರಿಗೊಂದು ನಮನ ಸಲ್ಲಿಸಲೇ ಬೇಕು .
ನಟಿಸುವುದರ ಜೊತೆಗೆ ಚಿತ್ರಕಥೆ ಬರೆದಿರುವ ಕಿಚ್ಚಸುದೀಪ್ ರವರ ಚಿತ್ರಕಥೆಯಲ್ಲಿ ಚಿತ್ರ ಚಕಚಕನೆ ಸಾಗುವುದು .
ಚಿತ್ರದ ಆರಂಭದಿಂದಲೂ ಭಾವನಾತ್ಮಕ ಅಂಶಗಳು ನಮ್ಮನ್ನು ಹಿಡಿದಿಡುವ ತಾಕತ್ ಇದೆ
ಪೈಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿದ ಅಂಬಿ ತನ್ನ ಇಳಿವಯಸ್ಸಿನಲ್ಲಿ ತನ್ನ ಮಗ ಸೊಸೆ ಮೊಮ್ಮಕ್ಕಳಜೊತೆ ಸುಖವಾಗಿರಲು ಹಾತೊರೆವ ಜೀವ ಆದರೆ ಮಗ ಸೊಸೆಯ ಅನಾದರ ಈ ಮದ್ಯ ಅಂಬಿ ಸಮಾಜ ಸೇವೆಯಿಂದ ಮಗ ಪೋಲೀಸ್ ಠಾಣೆ ಮೆಟ್ಟಿಲೇರಿ ಮಾತಿನ ಚಕಮಕಿಯಾಗಿ ಅಂಬಿ ಮನೆ ಬಿಟ್ಟು ಹೋಗುತ್ತಾರೆ .ಮುಂದೇನಾಗುವುದು ಎಂದು ಚಿತ್ರಮಂದಿರದಲ್ಲೇ ನೋಡಬೇಕು.
ಸಾಮಾನ್ಯವಾಗಿ ಇಳಿವಯಸ್ಸಿನಲ್ಲಿ ಮನೆಯವರ ಅನಾದರ ,ಅಲಕ್ಷ್ಯ,ಮುಂತಾದವುಗಳನ್ನು ಕಂಡು ಕುಗ್ಗಿ ಹೋಗುವ ಹಿರಿಯರ ಮದ್ಯ ಅಂಬಿ ನಮಗರ ವಿಶಿಷ್ಠವಾಗಿ ಕಾಣುತ್ತಾರೆ, ಆ ವಯಸ್ಸಿನಲ್ಲಿ ನಮ್ಮ ಹವ್ಯಾಸ ಕಳೆದುಕೊಂಡ ದನ್ನು ಹುಡುಕುವ ಇರದುದರ ಬಗ್ಗೆ ಚಿಂತಿಸದೇ ಬದುಕುವ ಪರಿಯನ್ನು ನಮ್ಮೆಲ್ಲ ಹಿರಿ ಜೀವಗಳು ಮೈಗೂಡಿಸಿಕೊಳ್ಳಬೇಕಿದೆ .ಜೊತೆಗೆ ತಮ್ಮ ವಯಸ್ಸಾದ ತಂದೆ ತಾಯಿ ಗಳನ್ನು ಕಳೆದುಕೊಂಡ ನಂತರ ಪರಿತಪಿಸುವ ಗುಣಗಳನ್ನು ಎಲ್ಲರೂ ಪಾಲಿಸಿದರೆ ಜಗತ್ತು ಸುಂದರವಾಗುವುದು
ರಾಕ್ ಲೈನ್ ವೆಂಕಟೇಶ್ ಪೋಲಿಸ್ ಅಧಿಕಾರಿಯಾಗಿ ,ದಿಲೀಪ್ ಮಗನಾಗಿ, ನಿಹಾಲ್ ಮೊಮ್ಮಗನಾಗಿ ಸುದೀಪ್ ಜ್ಯೂನಿಯರ್ ಅಂಬಿಯಾಗಿ,ಶೃತಿ ಹರಿಹರನ್ ಜ್ಯೂನಿಯರ್ ಅಂಬಿ ಜೋಡಿಯಾಗಿ ಸುಹಾಸಿನಿ ಸೀನಿಯರ್ ಅಂಬಿ ಜೋಡಿಯಾಗಿ ಎಲ್ಲರೂ ಪೈಪೋಟಿ ಗೆ ಬಿದ್ದವರಂತೆ ನಟಿಸಿದ್ದಾರೆ.
ಅರ್ಜನ್ ಜನ್ಯ ಸಂಗೀತ ಸೂಪರ್
ಡಾ.ನಾಗೇಂದ್ರ ಪ್ರಸಾದ್ ರವರ ರಚನೆ ಯ "ಮಾತಾಡೋ ತಾರೆಯ ಕಂಡ ಹಾಗೆ ಬೆಳದಿಂಗಳು ಕೈಗೆ ಸಿಕ್ಕ ಹಾಗೆ" ಸುಮದುರ ಹಾಡು ಜಸ್ಟಿನ್ ರೂಬೆನ್
ಕ್ಯಾಮರಾ ಕೈಚಳಕ ನೋಡಿಯೇ ಸವಿಯಬೇಕು .
ದೀಪು ಎಸ್ ಕುಮಾರ್ ಸಂಕಲನ ಸೂಪರ್ ರವಿವರ್ಮ ಮತ್ತು ಥ್ರಿಲ್ಲರ್ ಮಂಜು ಸಾಹಸ ರೆಬಲ್ ಸ್ಟಾರ್ ಗೆ ಹೇಳಿಮಾಡಿಸಿದಂತಿದೆ
ತಮಿಳಿನ ಪವರ್ ಪಾಂಡಿ ರೀಮೇಕ್ ಆದರೂ ಕನ್ನಡದ ಚಿತ್ರದಂತೆ ಕಟ್ಟಿಕೊಟ್ಟ ನಿರ್ದೇಶಕರಿಗೊಂದು ನಮನ .
ಈ ಚಿತ್ರ ನೀವು ನೀಡದಿದ್ದರೆ ಖಂಡಿತ ನಿಮಗೆ ಲಾಸ್
ನಮಸ್ಕಾರ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments:
Post a Comment