ಕಿರುಗಥೆ
*ಸಜ್ಜೆತೆನೆ ಮತ್ತು ರಾಜಪ್ಪ ಮಾಸ್ಟರ್*
ನಮ್ಮ ಊರು ಚೌಡಗೊಂಡನಹಳ್ಳಿ ಶಾಲೆಯಲ್ಲಿ ನಾಲ್ಕನೇ ತರಗತಿ ಪಾಸಾಗಿ ಎರಡು ಕಿಲೋಮೀಟರ್ ದೂರದ ಉಪ್ಪರಿಗೇನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ಹೋದರೆ ಆಗ ಉನ್ನತ ವ್ಯಾಸಂಗಕ್ಕೆ ಬೇರೆ ನಗರಕ್ಕೆ ಹೋದಂತೆ ಕೊಚ್ಚಿಕೊಳ್ಳುತ್ತಿದ್ದೆವು ಕಾರಣ ನಾಲ್ಕನೇ ತರಗತಿ ಪಾಸಾಗುವವರೇ ಅಂದು ವಿರಳ.
ನಾನು ಮತ್ತು ನನ್ನ ಸ್ನೇಹಿತರು ಐದನೇ ತರಗತಿ ಓದಲು ಉಪ್ಪರಿಗೇನಹಳ್ಳಿಗೆ ಪ್ರತಿದಿನ ಎರಡು ಕಿಲೋಮೀಟರ್ ನಡೆದೇ ಹೋಗುತ್ತಿದ್ದೆವು ಆಗ ಸ್ನೇಹಿತರ ಜೊತೆ ನಮ್ಮ ಆಟಗಳಿಗೆ ಕೊನೆ ಇರುತ್ತಿರಲಿಲ್ಲ.
ಒಮ್ಮೆ ಈಗೆ ನಡೆದು ಹೋಗುವಾಗ ಫಲ ಬಿಟ್ಟ ಹೊಲ ನೋಡುವುದೇ ಒಂದು ಆನಂದ. ಬರೀ ನೋಡಿ ಸುಮ್ಮನೆ ಬಿಡುವ ಜಾಯಮಾನವೆ ನಮ್ಮದು ? ಇಲ್ಲ ಪ್ರತಿದಿನ ಜೋಳದ ತೆನೆ ,ಸಜ್ಜೆಯತೆನೆ ಈಗೆ ಒಂದೊಂದು ದಿನ ಒಂದು ತರಹದ ಬೆಳೆ ಕಿತ್ತು ತಿಂದು ಆನಂದ ಪಡುತ್ತಿದ್ದೆವು. ಜೊತೆಗೆ ನಮ್ಮನ್ನು ಯಾರೂ ನೋಡಿಲ್ಲ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದೆವು .
ಒಂದು ದಿನ ಹೊಲದ ಮಾಲಿಕ ಅಣ್ಣಪ್ಪ ನಾವು ಶಾಲೆಗೆ ಹೋಗುವ ಮೊದಲೇ ಮುಖ್ಯ ಶಿಕ್ಷಕರ ಮುಂದೆ ಹಾಜರಾಗಿದ್ದರು ಮತ್ತು ನಮ್ಮ ಪರಾಕ್ರಮ ಅವರಿಗೊಪ್ಪಿಸಿದ್ದರು .
ಪರಿಣಾಮವಾಗಿ ನಮ್ಮ ಕೈಚೀಲ ತಪಾಸಣೆ ಮಾಡಿದಾಗ ಪ್ರತಿ ಬ್ಯಾಗ್ ನಲ್ಲಿ ಎರಡು ಮೂರು ಸಜ್ಜೆ ತೆನೆಗಳು ಸಿಕ್ಕವು .*ನೋಡಿ ಸ್ವಾಮಿ ನಿಮ್ಮ ಹುಡುಗರು ನನ್ನ ಹೊಲ ಹಾಳು ಮಾಡವ್ರೆ ಇದನ್ನೇ ಏನು ನೀವು ಇಸ್ಕೂಲ್ನಾಗೆ ಹೇಳ್ಕೊಡೋದು* ಎಂದು ಅಣ್ಣಪ್ಪ ಅಬ್ಬರಿಸಿದರು .ಅದನ್ನು ಕೇಳಿದ ನಮ್ಮ ರಾಜಪ್ಪ ಮಾಸ್ತರು ಕಚ್ಚೇ ಪಂಚೆ ಎಡಗೈ ನೆರಳಿನಲ್ಲಿ ಸುತ್ತುತ್ತಾ ಹಸಿ ಹುಣಸೇ ಬರಲಿನಿಂದ ನಮ್ಮನ್ನು ಚೆನ್ನಾಗಿ ಬಾರಿಸಿ *ರೈತನು ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಇನ್ನೊಮ್ಮೆ ಹಾಳು ಮಾಡಿದರೆ ಇದೇ ತರ ಬೀಳುವುದು* ಎಂದರು ಅಂದಿನಿಂದ ಸಜ್ಜೆ ಹೊಲ ಮತ್ತು ಹುಣಸೇ ಬರಲು(ಕೋಲು) ನೋಡಿದಾಕ್ಷಣ ರಾಜಪ್ಪ ಮಾಸ್ತರ್ ಮತ್ತು ಏಟು ನನೆದು ಮೈ ಸವರಿಕೊಳ್ಳುವೆ .
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments:
Post a Comment