30 ಜುಲೈ 2018

ಮಿತಿ ಮೀರಿದ ಬಳಕೆ ದಿನ* (Earth over shoot day ) ಆಗಸ್ಟ್ 1 ಲೇಖನ

                         *ಮಿತಿ ಮೀರಿದ ಬಳಕೆ ದಿನ*
(Earth over shoot day )
ಆಗಸ್ಟ್ 1

ಏನೆಂದು ನಾ ಹೇಳಲಿ ...ಮಾನವನಾಸೆಗೆ ಕೊನೆ ಎಲ್ಲಿ‌.... ಎಂಬ ಅಣ್ಣಾವ್ರ ಹಾಡು  ಇಂದಿಗೂ ಎಂದಿಗೂ ಪ್ರಸ್ತುತ .ಆಸೆಯೇ ದುಃಖದ ಮೂಲ ಎಂದು ಬುದ್ದನಾದಿಯಾಗಿ ಹಲವು ಮಹಾಷಯರು ಪ್ರತಿಪಾದಿಸಿದರೂ ನಾವಿರುವುದೇ ಈಗೆ ಎಂಬ ಧೋರಣೆಯನ್ನು ಮುಂದುವರೆಸಿಕೊಂಡು ಬಂದ ಪರಿಣಾಮ ನಾವು ಈಗಾಗಲೇ ವೈಯಕ್ತಿಕ ವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಇದರ ಪರಿಣಾಮವಾಗಿ ನಮ್ಮ ಸಾಮಾಜಿಕ, ಆರ್ಥಿಕ, ಆರೋಗ್ಯ ದ ಮೇಲೆ ಹಲವಾರು ದುಷ್ಪರಿಣಾಮಗಳನ್ನು  ಅನುಭವಿಸುತ್ತಿದ್ದೇವೆ .
ಇದು ಇಲ್ಲಿಗೇ ನಿಂತಿಲ್ಲ  ನಾವು ಮಾಡಿರುವ ಅವಾಂತರಗಳಿಂದ  ಪರಿಸರ ಮತ್ತು ಜಗದ ಮೇಲೆ ಬೀರಿರುವ ಪರಿಣಾಮ ನೆನದರೆ ಹಗಲಿನಲ್ಲಿಯೂ ಬೆಚ್ಚಿ ಬೀಳುವಂತಾಗುತ್ತದೆ.
ಹಸಿರು ಮನೆ ಪರಿಣಾಮ ,ಎಲ್ ನಿನೊ ಲಾ ನಿನೊ ,ಜಾಗತಿಕ ತಾಪಮಾನ ,ಓಜೋನ್ ಪದರದ ಹಾನಿಯಾಗಿರುವುದು ಒಂದೇ ಎರಡೆ ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆದೀತು ,ಇವೆಲ್ಲವುಗಳ ಪರಿಣಾಮವಾಗಿ ಋತುವಿನಲ್ಲಿ ಅದಲು ಬದಲು ಅದಿಕ ತಾಪಮಾನ, ದಿನಕ್ಕೊಂದು ಹೊಸ ರೋಗಗಳ ಸೇರ್ಪಡೆ, ಅನ್ನಹಾರಕ್ಕೆ ಹಾಹಾಕಾರ ,ಪ್ರಾಣಿ ಮಾನವ ಸಂಘರ್ಷ, ಮಾಲಿನ್ಯದಂತಹ ಅಪಸವ್ಯಯಗಳು ಮಾಮೂಲಾಗಿಬಿಟ್ಟಿವೆ .
ಇವೆಲ್ಲದರ ಪರಿಣಾಮವಾಗಿ ಈಗ ಬರಲಿರುವ ಆಗಸ್ಟ್‌ ಒಂದನ್ನು ನಾವು
Earth over shoot day   (ಮಿತಿ ಮೀರಿದ ಬಳಕೆ ದಿನ ) ಆಚರಿಸುತ್ತಿದ್ದೇವೆ  ಹಾಗಾದರೆ

 ಮಿತಿಮೀರಿದ ಬಳಕೆ ದಿನ ಎಂದರೇನು?

ಜಗತ್ತಿನ ಎಲ್ಲಾ ಜನರು ನಾವು ಬಳಸಲು ಯೋಗ್ಯವಾದ ನೈಸರ್ಗಿಕ ಸಂಪನ್ಮೂಲಗಳಾದ ಜಲ ,ವಾಯು,ಮುಂತಾದವುಗಳನ್ನು ನಾವು ಮಿತಿ ಮೀರಿ ಬಳಸಿದ್ದೇವೆ ಹೇಗೆಂದರೆ ಒಂದು ವರ್ಷದಲ್ಲಿ ನಾವು ಬಳಸ ಬೇಕಿದ್ದ ಸಂಪನ್ಮೂಲಗಳನ್ನು ಇದೇ ಜುಲೈ ತಿಂಗಳ ಮೂವತ್ತೊಂದನೆ ತಾರೀಖಿಗೆ ಮುಗಿಸಿದ್ದೇವೆ ! ಇದರ ನೆನಪಿಗೆ ಮತ್ತು ಮುಂದೆ ನಮ್ಮ ಜೀವನದ ದುಃಸ್ತಿತಿ ನೆನೆದು ಎಚ್ಚರಿಕೆಯಿಂದ  Earth over shoot day   (ಮಿತಿ ಮೀರಿದ ಬಳಕೆ ದಿನ )   ಆಚರಣೆ ಮಾಡುತ್ತಿದ್ದೇವೆ .

1970 ರಿಂದ ನಾವು ಇಂತಹ ಮಿತಿಮೀರಿದ ಸಂಪನ್ಮೂಲಗಳ ಬಳಕೆಯನ್ನು ಅಳತೆ ಮಾಡಲಾರಂಭಿಸಿದೆವು ಆ ವರ್ಷ ಒಂದು ದಿನ ಮೊದಲೇ ನಾವು ನಮ್ಮ ಸಂಪನ್ಮೂಲಗಳನ್ನು ಬಳಕೆ ಮಾಡಿದರೆ 1976 ರಲ್ಲಿ ನವಂಬರ್ ನಲ್ಲಿ ನಮ್ಮ ವರ್ಷದ ಸಂಪನ್ಮೂಲಗಳನ್ನು ಬರಿದು ಮಾಡಿದೆವು. 1990 ರಲ್ಲಿ ಸೆಪ್ಟೆಂಬರ್ ಮೂವತ್ತಕ್ಕೆ ನಮ್ಮ ಸಂಪನ್ಮೂಲಗಳನ್ನು ದೋಚಿದೆವು  ಕಳೆದ ವರ್ಷ 2018 ರಲ್ಲಿ ಮೂರಕ್ಕೆ ನಮ್ಮ ಸಂಪನ್ಮೂಲಗಳನ್ನು ಮುಗಿಸಿದೆವು .ಈ ವರ್ಷ ಮೂರು ದಿನ ಮೊದಲೇ ನಮ್ಮ ಸಂಪನ್ಮೂಲಗಳನ್ನು ಬರಿದು ಮಾಡಿ ಆಗಸ್ಟ್ ಒಂದರಂದು ಮಿತಿ ಮೀರಿದ ಬಳಕೆ ದಿನ ಆಚರಣೆ ಮಾಡುವ ದುಃಸ್ತಿತಿ ಬಂದೊದಗಿದೆ .
ನಾವು ಈಗೆ ಪ್ರಾಕೃತಿಕ ಸಂಪನ್ಮೂಲಗಳನ್ನು ಮಿತಿ ಮೀರಿ ಬಳಕೆ ಮಾಡಿದರೆ ಮುಂದಿನ ವರ್ಷಗಳಲ್ಲಿ ಎರಡು ಮೂರು ತಿಂಗಳಲ್ಲಿ ನಮ್ಮ ಸಂಪನ್ಮೂಲಗಳನ್ನು ಮುಗಿಸಿ ಮುಂದಿನ ಪೀಳಿಗೆಯ ಸಂಪನ್ಮೂಲಗಳನ್ನು ಬರಿದು ಮಾಡುವ ಬಕಾಸುರರಾಗುವುದರಲ್ಲಿ ಸಂದೇಹವಿಲ್ಲ .

ಈಗಲೂ ಕಾಲ ಮಿಂಚಿಲ್ಲ ನಮ್ಮಂತೆ ಇತರೆ ಪ್ರಾಣಿ ಪಕ್ಷಿ ಗಳಿಗೂ ಜೀವಿಸಲು ಅವಕಾಶ ನೀಡಬೇಕು ಬದುಕು ಬದುಕಲು ಬಿಡು ಎಂಬ ನಿಯಮ ಪಾಲಿಸಬೇಕು  ನಾವು ವಿವೇಚನೆಯಿಂದ ನಮಗೆ ಲಬ್ಯವಿರುವ ಸಂಪನ್ಮೂಲಗಳನ್ನು ಬಳಕೆ ಮಾಡಿ ಸುಸ್ಥಿರ ಅಭಿವೃದ್ಧಿ ಮಾಡುವ ಅಗತ್ಯವಿದೆ ಇಲ್ಲವಾದರೆ ನಮ್ಮ ಭಯಾನಕ  ಅಂತ್ಯಕೆ  ನಾವೇ ಮುನ್ನುಡಿ ಬರೆದಂತಾಗುತ್ತದೆ  ಯೋಚಿಸಿ ಯೋಜಿಸಿ  ಜೀವಿಸೋಣ  ಮಹಾತ್ಮ ಗಾಂಧೀಜಿ ಯವರು ಹೇಳಿದಂತೆ "ಪ್ರಕೃತಿ ಇರುವುದು ನಮ್ಮ ಆಸೆ ಈಡೇರಿಲು ಮಾತ್ರ ಆದರೆ ದುರಾಸೆಯನ್ನಲ್ಲ " ಎಂಬುದನ್ನು ನಾವು ಮರೆಯಬಾರದು.

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

29 ಜುಲೈ 2018

ನೆನದೇವ ಕನ್ನಡದ ಹಿರಿಮೆ ( ಕವಿತೆ ) ಹಚ್ಚೇವು ಕನ್ನಡದ ದೀಪ ಮಾದರಿಯಲ್ಲಿ


               ನೆನೆದೇವೋ ಕನ್ನಡದ ಹಿರಿಮೆ
ಕನ್ನಡದ ಹಿರಿಮೆ ನಮ್ಮಯ ಗರಿಮೆ
ಎದೆಯುಬ್ಬಿ ಹೊಗಳುವ ನುಡಿಯ | ನೆನದೇವ|
                 ೧

ಆದಿಕಾಲದಿಂದ ಆದಿಪಂಪನಿಂದ
ಬೆಳದಂತ ಭಾಷೆ ನಮ್ಮ ಕನ್ನಡ
ಸುಲಿದ ಬಾಳೆಯ ಹಾಗೆ ಸಿಗುರಳಿದ ಕಬ್ಬಿನ ಹಾಗೆ
ಸುಂದರ ಭಾಷೆ ನಮ್ಮ ಕನ್ನಡ
ಹಳಗನ್ನಡವಿರಲಿ ಹೊಸಗನ್ನಡವಿರಲಿ
ಕನ್ನಡದ ಕಂಪ ಸವಿದೇವು
ಬಳಸುತ್ತ ನುಡಿಯ ಬೆಳಸುತ್ತ ಭಾಷೆಯ
ನಲಿಯೋಣ ,ಕಣ ಕಣಗಳಲ್ಲಿ ಮನ ಮನೆಗಳಲ್ಲಿ
ನೆನದೇವ ಕನ್ನಡದ ಹಿರಿಮೆ

                           | ನೆನದೇವ ಕನ್ನಡದ |

              ೨

ಶಾಸ್ತ್ರೀಯ ಭಾ಼ಷೆ ಶಾಸ್ತ್ರೋಕ್ತ ಭಾಷೆ
ವಿದೇಶಿಯರು ಮೆಚ್ಚಿದ ಭಾಷೆ
ಸ್ಪಟಿಕದಂತಹ ಉಚ್ಚಾರದ ನುಡಿಯ
ಪಟಪಟನೆ ಉಲಿದು ನಲಿವೇವು
ನಮ್ಮ ನುಡಿಬರದ ಅನ್ಯ ರಿಗೆ
ಪ್ರೀತಿಯಿಂದಲಿ ಭಾಷೆ ಕಲಿಸುವೆವು
ಕಣಕಣದಿ ಅಭಿಮಾನ
ಉಕ್ಕುತಿದೆ ಸ್ವಾಭಿಮಾನ
ಮುನ್ನೆಡೆಗೆ ತಡೆಯುಂಟೆ ತಾಯ್ನುಡಿಗೆ
ನಾಡಮಕ್ಕಳು ಸೇರಿ ಮಾತೃಭಾಷೆಗೆ ನಮಿಸಿ
ನೆನದೇವ ಕನ್ನಡದ ಹಿರಿಮೆ

                               |ನೆನದೇವ ಕನ್ನಡದ|

              ೩

ನಮ್ಮ ನುಡಿ ಮೆಚ್ಚಿ ನಮ್ಮ ನಾಡಿಗೆ
ಬಂದರೆ ಸ್ವಾಗತಿಸುವ
ರತ್ನಗಂಬಳಿ ಹಾಸಿ ರತ್ನದಂತಹ
ನುಡಿ ಕಲಿಸುವೆವು
ನಮ್ಮನ್ನವನುಂಡು ನುಡಿವಿರೋಧಿಸುವವರ
ನಡುಮುರಿಯಲು ಹಿಂಜರಿಯೆವು
ಮರೆಯಲ್ಲ ಛಲವ ನಿಲ್ಲಲ್ಲ
ನಾಡೋಲವುಅನವರತ
ನಾಲಿಗೆಯ ಸೀಳಿ ನರಕಕ್ಕೆ ಇಳಿಸಿದರೂ
ನೆನದೇವ ಕನ್ನಡದ ಹಿರಿಮೆ

                      |ನೆನದೇವ ಕನ್ನಡದ|


            ೪


ರನ್ನ ಜನ್ನರ ಚೆನ್ನ ನುಡಿಉಳಿಸಲು
ಎಲ್ಲರೂ ಒಂದುಗೂಡೋಣ
ನಮ್ಮಂತರಂಗದಿ ಕನ್ನಡಮ್ಮನ
ಪೂಜೆ ಮಾಡೋಣ
ಅನ್ಮವನು ನೀಡಿದ
ಕನ್ನಡಮ್ಮಗೆ ವಂದನೆಯ ಗೀತೆ ಹಾಡೋಣ
ತೊರೆದೇವು ಅನೇಕತೆ ಹೊಂದೋಣ ಏಕತೆ
ನಮ್ಮ ನುಡಿಗೆ ಒಗ್ಗೂಡೋಣ
ಅಂತರಂಗದ ನುಡಿಗೆ ಸಂತಸದಿ ನಮಿಸಿ
ನೆನದೇವ ಕನ್ನಡದ ಹಿರಿಮೆ

                                 |ನೆನದೇವ ಕನ್ನಡದ|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*






ನಮ್ಮ ದೇಹದ42 ರಹಸ್ಯಗಳು (ಸಂಗ್ರಹ ಲೇಖನ)

                     *ನಮ್ಮ ದೇಹದ ಬಗ್ಗೆ ನಮಗೇ ಗೊತ್ತಿಲ್ಲದಿರೋ ವಿಚಿತ್ರ ಸತ್ಯಗಳು ಆದ್ಭುತಗಳು ಹೊರಗೆಲ್ಲೋ ಅಲ್ಲ, ನಿಮ್ಮ ದೇಹದಲ್ಲೇ ಇವೆ*

*ನಮ್ಮ ದೇಹದ ಬಗ್ಗೆ ತಿಳ್ಕೊಳಕ್ಕಬ್ರಹ್ಮಾಂಡದಷ್ಟಿದ ಮೊದಲು ಕೇಳಿದಾಗ ನಮಗೆ ಬಹಳ ಆಶ್ಚರ್ಯಆಯಿತು. ನಿಮಗೂ ಆಗೋದ್ರಲ್ಲಿ ಸಂದೇಹ ಇಲ್ಲ, ಓದ್ತಾ ಹೋಗಿ…*

*1. ಒಬ್ಬೊಬ್ಬರ ನಾಲಿಗೆ ಇನ್ನೊಬ್ಬರ ತರಹ ಇರಲ್ಲ - ಬೆರಳಚ್ಚು ಹೇಗೋ ಹಾಗೆ ಸೈನ್ ಹಾಕಕ್ಕೆ ಬರದೆ ಇರೋರು ಹೆಬ್ಬೆಟ್ಟು ಯಾಕೆ ಒತ್ತುತ್ತಾರೆ ಹೇಳಿ? ಯಾಕಂದ್ರೆ ಬೆರಳಚ್ಚು ಒಬ್ಬೊಬ್ಬರಿಗೂ ಬೇರ್ಬೇರೆ. ಹಾಗೇ ನಿಮ್ಮ ನಾಲಿಗೆ ಅಚ್ಚು ಕೂಡ ಬೇರೆಯೋರ ತರಹ ಇರಲ್ಲ.*

*2. ಒಂದು ಕೂದಲಲ್ಲಿ ಒಂದು ಸೇಬು ನೇತು ಹಾಕಬಹುದು. ಅಷ್ಟು ಶಕ್ತಿ ಇರುತ್ತೆ ಅದಕ್ಕೆ.*

*3. ಭೂಮಿ ಮೇಲೆ ಎಷ್ಟು ಜನ ಇರ್ತಾರೋ ಅಷ್ಟೇ ಬ್ಯಾಕ್ಟೀರಿಯಾಗಳು ನಿಮ್ಮ ಬಾಯಲ್ಲೂ ಇರುತ್ವೆ. ಆದ್ರೆ ಅವು ತೊಂದ್ರೆ ಮಾಡಲ್ಲ ಬಿಡಿ.*

*4. ನಿಮ್ಮ ಉಗುರಲ್ಲಿ ಈ ತರಹ ಅರ್ಧಚಂದ್ರಾಕಾರ ಕಾಣಿಸ್ತಾ ಇಲ್ಲದೆ ಹೋದ್ರೆ, ಅಥವಾ ಉಗುರು ತುಂಬ ಮೃದುವಾಗಿದ್ದು ಬೇಗ ಮುರಿದು ಹೋಗ್ತಿದ್ರೆ, ನಿಮ್ಮ ಥೈರಾಯಿಡ್ ಹಾರ್ಮೋನ್ ಹೆಚ್ಚಾಗಿದೆ ಅಂತರ್ಥ.*

*5. ನಿಮ್ಮ ಮೆದುಳಿಗೆ ತಲುಪೋ ವಿಚಾರಗಳು ಗಂಟೆಗೆ 400 ಕಿ.ಮಿ ವೇಗದಲ್ಲಿ ಚೆಲಿಸುತ್ತೆ.*

*6. ಮನುಷ್ಯನ ರಕ್ತದಲ್ಲಿ 29 ಬಗೆ. ಅತೀ ಅಪರೂಪದ್ದು ಜಪಾನಿನ ಒಂದು ಸಣ್ಣ ಕುಟುಂಬದಲ್ಲಿ ಸಿಗುತ್ತೆ.*

*7. ಒಂದ್ ದಿನಕ್ಕೆ ನಮ್ಮ ರಕ್ತ ಇಡೀ ದೇಹ ಸುತ್ತು ಹಾಕಿ 19,312 ಕಿ.ಮೀ ಚಲಿಸುತ್ತೆ.*

*8. ನಮ್ಮ ದೇಹದ ನರಗಳನ್ನೆಲ್ಲ ಒಟ್ತುಗೂಡಿಸಿ ನೋಡಿದ್ರೆ ಅದರ ಉದ್ದ 75 ಕಿ.ಮಿ ಆಗುತ್ತೆ.*

*9. ಒಂದು ದಿನಕ್ಕೆ ಸುಮಾರು 20,000 ಬಾರಿ ಉಸಿರಾಡ್ತೀವಿ.*

*10. ನಮ್ಮ ಕಣ್ಣುಗಳು ಸುಮಾರು 1 ಕೋಟಿ ಬಣ್ಣಗಳನ್ನ ಗುರುತಿಸುತ್ವೆ, ಆದ್ರೆ ನಮ್ಮ ಮೆದುಳಿಗೆ ಅವನ್ನೆಲ್ಲಾ ನೆನಪಿನಲ್ಲಿಟ್ಟುಕೊಳ್ಳೋ ಶಕ್ತಿ ಇಲ್ಲ.*

*11. ಮನುಷ್ಯ ಬದುಕಿರೋ ವರೆಗೂ ಅವನ ಕಿವಿ ಬೆಳೀತಾನೆ ಇರುತ್ತೆ - ವರ್ಷಕ್ಕೆ 0.25 mm ನಷ್ಟು*

*12. ನಮ್ಮ ಹೃದಯ ವರ್ಷಕ್ಕೆ 35 ಕೋಟಿ ಸಲ ಬಡಿಯುತ್ತೆ.*

*13. ಪ್ರತಿದಿನ ನಮ್ಮ ದೇಹ ಸುಮಾರು 1 ಕೋಟಿ ಚರ್ಮ ಕಣಗಳನ್ನ ಕಳೆದುಕೊಳ್ಳುತ್ವೆ. ಸರಿಯಾಗಿ ತೂಕ ಮಾಡಿ ನೋಡಿದ್ರೆ ವರ್ಷಕ್ಕ 2 ಕಿಲೋ ಗೊತ್ತಾ!*

*14. ನಮ್ಮ ಚರ್ಮದ 1 sq.cm ವಿಸ್ತೀರ್ಣದಲ್ಲಿ ನೂರಾರು ನೋವಿನ ಕೋಶಗಳಿರುತ್ತವೆ.*

*15. ಹೆಣ್ಣು ಮಕ್ಕಳ ನಾಲಿಗೇಲಿ ಗಂಡು ಮಕ್ಕಳಿಗಿಂತ ಜಾಸ್ತಿ ರುಚಿಯ ಕಣಗಳು ಇರುತ್ತವೆ.*

*16. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಟ್ಟು 35 ಟನ್ ತಿಂತಾನೆ.*

*17. ಒಬ್ಬ ಮನುಷ್ಯ ಕೇವಲ ಕಣ್ಣು ಮಿಟಿಕಿಸೋದ್ರಲ್ಲೇ 5 ವರ್ಷ ಕಳೀತಾನೆ. ಮಿಟುಕಿಸ್ತಾ ಕೆಲವರು ಬೇರೆ ಕೆಲಸಾನೂ ಮಾಡ್ತಾರೆ*

*18. ಒಂದು ಸೆಕೆಂಡಲ್ಲಿ ನಮ್ಮ ಮೆದುಳಲ್ಲಿ 1 ಲಕ್ಷ ರಾಸಾಯನಿಕ ಕ್ರಿಯೆಗಳಾಗುತ್ವೆ.*

*19. ನೀವು ಶೀತ ಆದಾಗ ಸೀನ್ತೀರಲ್ಲ ಅದರ ವೇಗ ಗಂಟೆಗೆ 160 ಕಿ. ಮೀ ಇರುತ್ತೆ.*

*20. ನಕ್ಕಾಗ ನಿಮ್ಮ ಮುಖದ 17 ಬೇರೆ ಬೇರೆ ಮಾಂಸ ಖಂಡಗಳು ಕೆಲ್ಸ ಮಾಡುತ್ತವೆ… ಅತ್ತಾಗ 43... ಅಂದ್ರೆ ಅಳಕ್ಕೆ ಕೆಲಸ ಜಾಸ್ತಿ ಮಾಡಬೇಕು*

*21. ಗಂಡಸರಿಗೆ ದಿನಕ್ಕೆ 40 ಕೂದಲು ಉದುರಿದರೆ ಹೆಂಗಸರಿಗೆ 70 ಉದುರುತ್ತೆ*

*22. ಮನುಷ್ಯನಿಗೆ ನೀರಿನಿಂದ ಸಿಗುವಷ್ಟು ಶಕ್ತಿ ಆಹಾರ ಪದಾರ್ಥಗಳಿಂದಸಿಗಲ್ಲ*   
                     
*23. ದೇಹದಲ್ಲಿ ಅತ್ಯಂತ ಶಕ್ತಿಯುಳ್ಳ ಸ್ನಾಯು ಅಂದ್ರೆ ನಾಲಿಗೆ*

*24. ಉಗುರು ಮತ್ತು ಕೂದಲು ಎರಡೂ ಒಂದೇ ವಸ್ತುವಿನಿಂದ ಕೂಡಿರುತ್ತವೆ*

*25. ನಾಲಿಗೆಯ ಟೇಸ್ಟ್ ಬಡ್ಸ್ ಜೀವಾವಧಿ ಸುಮಾರು 10 ದಿನ ಮಾತ್ರ. ನಂತರ ಬೇರೆ ಹುಟ್ಟುತ್ತವೆ.*

*26. ವಸಂತ ಋತುವಿನಲ್ಲಿ ಮಕ್ಕಳು ಹೆಚ್ಚು ಬೆಳೀತಾರೆ.*

*27. ಸೀನಿದಾಗ ದೇಹದ ಎಲ್ಲಾ ಕ್ರಿಯೆಗಳೂ ತಾತ್ಕಾಲಿಕವಾಗಿ ನಿಲ್ಲುತ್ತವೆ. ಎದೆ ಕೂಡ ಬಡಿದುಕೊಳ್ಳಲ್ಲ.*

*28. ತಲೆಬುರುಡೆಯಲ್ಲಿ 26 ಬೇರೆಬೇರೆ ಮೂಳೆಗಳಿರುತ್ತವೆ*

*29. ಬಿಸಿಲಲ್ಲಿ ಕೈ ಸುಡುತ್ತಿದ್ದರೆ ನಿಮ್ಮ ದೇಹದಲ್ಲಿ ಸಾಕಷ್ಟು ನೀರಿಲ್ಲ ಅಂತ ಅರ್ಥ. ಕುಡೀರಿ!*

*30. ಹೆಚ್ಚು ಉಪ್ಪು ತಿನ್ನುವುದರಿಂದ ಎಲ್ಲಾ ರೀತಿಯ ರೋಗಗಳು ಬರುತ್ತವೆ ಸಕ್ಕರೆ ಖಾಯಿಲೆ, ಶ್ವಾಸಕೋಶ ಮತ್ತು ಕಿಡ್ನಿ ಸಮಸ್ಯೆಗಳು...*

*31. ಮನುಷ್ಯನ ದೇಹದಲ್ಲಿ ಸರಾಸರಿ 10,000 ಕೋಟಿ ನರಕೋಶ (ನರ್ವ್ ಸೆಲ್ಸ್) ಇರುತ್ತೆ*

*32. ಬೇಯಿಸದ ಅಡುಗೆ (ಉದಾ: ಕೋಸಂಬರಿ) ಬೇಯಿಸಿದ ಅಡುಗೆಗಿಂತ ಎರಡರಷ್ಟು ಬೇಗ ಅರಗುತ್ತದೆ*

*33. ಮಂಡಿಚಿಪ್ಪು (ನೀ ಕ್ಯಾಪ್) ಹುಟ್ಟುತ್ತಲೇ ಇರೋದಿಲ್ಲ. 2-6 ವರ್ಷ ಆಗುವಷ್ಟರಲ್ಲಿ ಬೆಳೆಯುತ್ತದೆ.*

*34. ಹೃದಯ ದಿನಕ್ಕೆ ಸುಮಾರು 1,000 ಸಲ ರಕ್ತವನ್ನು ಸುತ್ತು ಹಾಕಿಸುತ್ತದೆ*

*35. ನಮ್ಮ ಮೂಳೆಗಳಿಗೆ ಮನೆ ಕಟ್ಟಕ್ಕೆ ಬಳಸುವ ಸಿಮೆಂಟ್ ಕಾಂಕ್ರೀಟಿನ 4ರಷ್ಟು ಶಕ್ತಿಯಿರುತ್ತದೆ*

*ಚುಕ್ಕುಬುಕ್ಕು*

*36. ತಿಂದಿದ್ದು ಬಾಯಿಂದ ಹೊಟ್ಟೆ ವರೆಗೆ ಹೋಗಕ್ಕೆ 7 ಸೆಕೆಂಡ್ ತೊಗೊಳ್ಳುತ್ತೆ*

*37. ನಮಗೆ ಹುಟ್ಟಿದಾಗ 300 ಮೂಳೆಗಳಿರುತ್ತವೆ. ದೊಡ್ಡವರಾಗುತ್ತಿದ್ದಂತೆ ಅದು 206 ಆಗುತ್ತದೆ.*

*38. ಒಂದು ಕಣ್ಣಿನ ರೆಪ್ಪೆ ಸುಮಾರು 5 ತಿಂಗಳಿರುತ್ತದೆ. ಆಮೇಲೆ ಉದುರಿ ಹೋಗುತ್ತದೆ.*

*39. ಎರಡು ಹುಬ್ಬೂ ಸೇರಿದರೆ ಸುಮಾರು 1,000 ಕೂದಲಿರುತ್ತೆ*

*40. ಕಿವಿಯಲ್ಲಿ ದೇಹದ ಅತ್ಯಂತ ಚಿಕ್ಕ ಮೂಳೆಯಿರುತ್ತದೆ*

*41. ಮಕ್ಕಳ ನಾಲಿಗೆಯಲ್ಲಿ ದೊಡ್ಡೋರಿಗಿಂತ ಜಾಸ್ತಿ ಟೇಸ್ಟ್ ಬಡ್ಸ್ ಇರುತ್ತವೆ*

*42. ವಯಸ್ಸಾಗುತ್ತಿದ್ದ ಹಾಗೆ ಕಣ್ಣು ದೊಡ್ಡದಾಗೋದಿಲ್ಲ. ಆದರೆ ಕಿವಿ ಮತ್ತು ಮೂಗು ಆಗುತ್ತಲೇ ಇರುತ್ತವೆ.*

*ಸಂಗ್ರಹ: ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 ಜುಲೈ 2018

ಜೀವಿಸು ಖುಷಿಯಲಿ ( ಕವನ)

        *ಜೀವಿಸು ಖುಷಿಯಲಿ*

ಸುಂದರ   ಬದುಕು
ನಿನ್ನದೆ ಕೈಲಿದೆ
ಸಾಗು ಮುಂದೆ
ಸ್ಚರ್ಗವು ಕಾದಿದೆ

ಕಲ್ಲಿದೆ ಮುಳ್ಳಿದೆ
ನಿನ್ನಯ ದಾರಿಯಲಿ
ಅಂಜದೆ ಅಳುಕದೆ
ನುಗ್ಗು ಖುಷಿಯಲಿ

ನೂರಾರು ತಿರುವು
ಬಾಳಲಿ ಬರುವುದು
ವಿಶ್ವಾಸ ಇದ್ದರೆ
ದಾರಿಯು ಕಾಣುವುದು

ನೋವು ನಲಿವು
ಸಾಮಾನ್ಯ ಜಗದಲಿ
ಗೆಲ್ಲಲಿ ಸೋಲಲಿ
ಜೀವಿಸು ಖುಷಿಯಲಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



25 ಜುಲೈ 2018

ದೇಶಭಕ್ತಿ ( ನ್ಯಾನೋ ಕಥೆ)

                 *ನ್ಯಾನೋ ಕಥೆ*

*ದೇಶಭಕ್ತಿ*

ಶಾಲೆಯ ಬೆಳಗಿನ ಪ್ರಾರ್ಥನೆ ವೇಳೆಯಲ್ಲಿ ಎಲ್ಲಾ ಮಕ್ಕಳು ರಾಷ್ಟಗೀತೆಯನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು  ಅಕ್ಕ ಪಕ್ಕದಲ್ಲಿ ನಡೆದಾಡುತ್ತಿದ್ದ ಸಾಮಾನ್ಯ ಜನರು ಕೆಲ ಕಾಲ ನಿಂತು ರಾಷ್ಟಗೀತೆಗೆ ಗೌರವ ಸೂಚಿಸಿದರು ಮಧ್ಯ ವಯಸ್ಕ ಒಬ್ಬ ವ್ಯಕ್ತಿ  ಮಾತ್ರ ರಾಷ್ಟಗೀತೆಗೆ ಗೌರವ ನೀಡದೆ   ನಡೆದು ಮಂದೆ ಹೋದರು ಆ ವ್ಯಕ್ತಿಯ ಗುರುತು ಹಿಡಿದ ಭಾರತಿ ಮನದಲ್ಲಿ ಅವರು ದೇಶಭಕ್ತಿಯ ಬಗ್ಗೆ ಕಳೆದ ದಿನ ಎರಡು ಗಂಟೆ ಮಾಡಿದ ಭಾಷಣ ನೆನಪಾಯಿತು ಅದರಲ್ಲೂ " ಎಂತಾ ಪರಿಸ್ಥಿತಿಯಲ್ಲೂ ದೇಶಭಕ್ತಿ ಮೆರಯಬೇಕು ನಮ್ಮ ರಾಷ್ಟ್ರಗೀತೆ ರಾಷ್ಟ್ರ ದ್ವಜಕ್ಕೆ ಗೌರವ ನೀಡಲೇಬೇಕು" ಈ ಶಬ್ಬಗಳು ಭಾರತಿಯ ಕಿವಿಯಲ್ಲಿ ಗುಯ್ ಗುಡುತ್ತಿದ್ದವು ,ಶಿಕ್ಷಕರು ಬೋಲೋಭಾರತ್ ಮಾತಾಕಿ ಎಂದಾಗ ಭಾರತಿಯು ಕೈಗಳನ್ನು ಮೇಲೆತ್ತಿ ಜೈ ಎಂದು ಹೆಮ್ಮೆಯಿಂದ ಹೇಳಿದಳು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*