31 ಆಗಸ್ಟ್ 2017

ಸರ್ಕಾರಿ ನೌಕರ ಕುರಿತು ದುಬೈ ದೊರೆ ಮಾತು.ವಿಶ್ವೇಶ್ವರ ಭಟ್ ರವರ ಅಂಕಣದಲ್ಲಿ


S.S.L.C ಮಕ್ಕಳಿಗೆ ಮಾರ್ಗದರ್ಶನ


  1. ಎಲ್ಲಾ ವಿದ್ಯಾರ್ಥಿಗಳ ಜೀವನದಲ್ಲಿ ಎಸ್ ಎಸ್ ಎಲ್ ಸಿ ಒಂದು ಪ್ರಮುಖ ಘಟ್ಟ ಮನೆಯಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿದ್ದರೆ ವರ್ಷದ ಆರಂಭದಿಂದ ಮಕ್ಕಳು ಮತ್ತು ಪೋಷಕರಲ್ಲಿ ಒಂದು ಅವ್ಯಕ್ತ ಆತಂಕ ಮನೆ ಮಾಡಿರುತ್ತದೆ ಹಗ್ಇ
    ದು ಅಪೇಕ್ಷಿತ ಅಲ್ಲದಿದ್ದರೂ ಅನಿವಾರ್ಯ ಎಂಬಂತಾಗಿ ಬಿಟ್ಟಿದೆ ಕ್ರಮಬದ್ಧವಾಗಿ ಅದ್ಯಯನ ಮಾಡಿದರೆ ಈ ಪರೀಕ್ಷೆಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಸೆಪ್ಟೆಂಬರ್ ತಿಂಗಳಲ್ಲಿ ಎಸ್ ಎಸ್ ಎಲ್ ಸಿ‌ ವಿದ್ಯಾರ್ಥಿಗಳು ಮದ್ಯವಾರ್ಷಿಕ ಪರೀಕ್ಷೆ ಎದುರಿಸಲು ಸಿದ್ದ ಆಗಬೇಕು ಈ ದಿಸೆಯಲ್ಲಿ.  ಪಾಲಕರ ಮತ್ತು ವಿದ್ಯಾರ್ಥಿಗಳ ಜವಾಭ‍್ದಾರಿ ಮತ್ತು ಪಾತ್ರ ಮಹತ್ತರವಾದುದು.          ವಿದ್ಯಾರ್ಥಿಗಳೇನುಮಾಡಬೇಕು
 1  ಪ್ರತಿದಿನವೂ ಸಂತೋಷದಿಂದಿರಿ          2  ಅವಸರ ಮತ್ತು ಆತುರದ ನಿರ್ಧಾರಗಳಿಂದ ನೀವು ಕಲಿತದ್ದು ಮರೆತು ಹೋಗಬಹುದು ಆದ್ದರಿಂಧ ಯಾವಾಗಲೂ ಶಾಂತತೆಯನ್ನು ಕಾಪಾಡಿಕೊಳ‍್ಳಿ.                 3  ಪ್ರತಿ ದಿನ ಯೋಗ ಧ‍್ಯಾನ,ಪ್ರಾರ್ಥನೆಮಾಡಿ ಏಕಾಗ್ರತೆಯನ್ನು ಸಾಧಿದಬಹುದು             
4 ಮನೆಯವರು ಸಿನಿಮಾ ಮಾರ್ಕೇಟ್ ,ಜಾತ್ರೆಗಳಿಗೆ ಹೋದರೆ ನೀವು ಅವರನ್ನು ಹಿಂಬಾಲಿಸಬೇಡಿ                                    5 ರಿಲ್ಯಾಕ್ಸ್ ಬೇಕೆಂದು ಹೆಚ್ಚು ಹೊತ್ತು ಹೊರಗೆ ಸುತ್ತ ಬೇಡಿ                               6 ಎಲ್ಲೇ ಹೋದರೂ ಸಮಯದ ಅರಿವಿರಲಿ                                            7 ನಿಮ್ಮ ಸಹನೆ ಪರೀಕ್ಷೆಯಾಗುವುದು ಪರೀಕ್ಷೆಯಕಾಲದಲ್ಲಿ ಅದಕ್ಕೆ ತಾಳ‍್ಮೆಯಿಂದಿರಿ                                    8 ವಿದ್ಯಾರ್ಥಿಗಳೆ ನಿಮ್ಮ ಭವಿಷ್ಯ ಹಾಳು ಮಾಡಿಕೊಳ‍್ಳದಿರಿ                                      9 ನಿಸ್ವಾರ್ಥ ಮನೋಭಾವವಿರಲಿ .                                                                          ಪಾಲಕರು ಮಾಡಬೇಕಾದುದು                                 1 ಸಮಯಕ್ಕೆ ಸರಿಯಾಗಿ ಮಕ್ಕಳಿಗೆ  ಪೌಷ್ಟಿಕ ಆಹಾರ ನೀಡಿ.                              2. ಓದಲು ಶಾಂತವಾಧ ವಾತಾವರಣ ಕಲ್ಪಿಸಿ ಕೊಡಿ                                         3ಎಲ್ಲಾ ಭಾವನೆಗಳನ್ನು ಹಂಚಿಕೊಳ‍್ಳಲು ನಾನಿದ್ದೇನೆಂದು ಭರವಸೆ ಕೊಡಿ.                4 ಓದಿದ ಮನಸಿಗೆ ವಿರಾಮ ನಿದ್ರೆ ಅವಶ್ಕಕ ಅದಕ್ಕೆ ಅವಕಾಶ ಮಾಡಿಕೊಡಿ                 
  5 ಎಲ್ಲಾ ಸಮಯದಲ್ಲಿ ಓದು ಓದು ಎಂದು “ಕಿರಿ ಕಿರಿ “ಮಾಡದಿರಿ                   6ಮತ್ತೆ ಮತ್ತೆ “ಪರೀಕ್ಷೆ ಹತ್ತಿರ ಬರುತ್ತಿದೆ “ಎಂದು ಭಯಪಡಿಸಬೇಡಿ .                      7 ಮಕ್ಕಳು ಪ್ರತಿನಿತ್ಯ ಇಷ್ಟಪಟ್ಟು ಓದುವಂತೆಪ್ರೇರೇಪಿಸಿ .                   ಪರೀಕ್ಷೆಯ ಹಿಂದಿನ ದಿನದ  ಸಿದ್ದತೆ          1 ತುಂಬಾನಿದ್ದೆಗೆಟ್ಟು ಓದಬೇಡಿ ಮೆದುಳು ವಿಪರೀತ ದಣದರೆ ನೆನಪಿನ ಶಕ್ತಿ ಕುಂಟಿತವಾಗುತ್ತದೆ                                    2 ಕಡ್ಡಾಯವಾಗಿ ಆರು ಗಂಟೆ ನಿದ್ರೆ ಮಾಡಿ.                                                3 ಪೆನ್ನು .ಪೆನ್ಸಿಲ್.ಇರೇಸರ್.ಜಾಮಿಟ್ರಿ ಬಾಕ್ಸ್,ಇತ್ಯಾಧೀ ಲೇಖನ ಸಾಮಗ್ರಿಗಳನ್ನು ಜೋಡಿಸಿಟ್ಟುಕೊಳ‍್ಳಿ,ಜೊತೆಗೆ ಹಾಲ್ ಟಿಕೆಟ್,ಗುರುತಿನ ಚೀಟಿ ಇರಲಿ                 4 ಮತ್ತೊಮ್ಮೆ ವೇಳಾಪಟ್ಟಿ ಪರೀಕ್ಷಿಸಿ         5 ನಾಳೆ ನಾನು ಪರೀಕ್ಷೆ ಖಂಡಿತವಾಗಿ ಚೆನ್ನಾಗಿ ಬರೆಯುತ್ತೇನೆಂದು ಸಂಕಲ್ಪ ಮಾಡಿಕೊಂಡು ಮಲಗಿ                                                                                    6 ಬೇಗ ಮಲಗಿ ಬೇಗ ಏಳಿ.                                                                                                                                          ಪರೀಕ್ಷೆಯದಿನ        .                     1 ಬೆಳಿಗ್ಗೆ ಬೇಗ ಎದ್ದು ನಿತ್ಯಕರ್ಮ ಮುಗಿಸಿ      ಹತ್ತು ನಿಮಿಷ ಧ್ಯಾನ ಮಾಡಿ ನಾನು ಪರೀಕ್ಷೆಯಲ್ಲಿ ಉತ್ತಮವಾಗಿ ಉತ್ತರಿಸಬಲ್ಲೆ ಎಂದು ಸಂಕಲ್ಪ ಮಾಡಿ      
2 ಹಿಂದಿನ  ದಿನ ಹೊಂದಿಸಿಟ್ಟುಕೊಂಡಿದ್ದ ಲೇಖನಸಾಮಗ್ರಿಗಳನ್ನು ನೋಡಿಕೊಳ‍್ಳಿ.               
  3ಬೆಳಿಗ್ಗೆ ತಿಂಡಿ ತಿನ್ನುವುದನ್ನು ಮರೆಯಬೇಡಿನಿಮ್ಮ .ಜೊತೆಗೆ ಪರಿಕ್ಷೆಗೆ ನೀರಿನ ಬಾಟಲ್ ತೆಗೆದುಕೊಂಡುಹೋಗಿ                                                               4ಮನೆ ಬಿಡುವ ಹೊತ್ತಿನಲ್ಲಿ ಓದುತ್ತಾ ಕುಳಿತುಕೊಳ‍್ಳಬೇಡಿ ಒಂದು ಗಂಟೆ ಮುಂಚಿತವಾಗಿ ನಿಲ್ಲಿಸಿ ಮೆದುಳು ವಿಶ್ರಾಂತ ಸ್ತಿತಿಯಲ್ಲಿರಬೇಕು.                               5 ಪರೀಕ್ಷಾ ಕೇಂದ್ರಕ್ಕೆ ಅರ್ದ ಗಂಟೆ ಮೊದಲೇ ತಲುಪಿ ನಿಮ್ಮರಿಜಿಸ್ತರ್ ನಂಬರ್ ಕೊಠಡಿ ಆಸನ ವ್ಯವಸ್ತೆ ನೋಡಿಕೊಳ‍್ಳಿ.         6 ಪರೀಕ್ಷಾ ಕೇಂದ್ರದ ಬಳಿನಿಮ್ಮ ಸ್ನೇಹಿತರ ಜೊತೆ ಅಂದಿನ ವಿಷಯದ ಬಗ್ಗೆ ಚರ್ಚೆ ಬೇಡ.           
                      ಪರೀಕ್ಷಾ        ಕೊಠಡಿಯಲ್ಲಿ                                     1 .15 ನಿಮಿಷ ಮೊದಲೇ ಪರೀಕ್ಷಾ ಖೋಠಡಿಯಲ್ಲಿ ಕುಳಿತುಕೊಳ‍್ಳಿ.                2. ಕೆಲ ಕಾಲ ಧೀರ್ಘ ಊಸಿರೆಳೆದು ಕೊಂಡು ಧ‍್ಯಾನ ಮಾಡಿ.                               3ಪ್ರಶ‍್ನೆ ಪತ್ರಿಕೆ ಮತ್ತು  ಉತ್ತರ ಪತ್ರಿಕೆ ಪಡೆದ ಬಳಿಕ ಎಲ್ಲಾ ಪುಟಗಳು ಮುದ್ರಿತವಾಗಿವೆಯೇ ಎಂದು ಪರೀಕ್ಷಿಸಿಕೊಳ‍್ಳಿ.                                       4ಪ್ರಶ್ನೆ ಪತ್ರಿಕೆಯನ್ನು ತಾಳ‍್ಮೆಯಿಂದ ಸಂಪೂರ್ಣವಾಗಿ ಒಮ್ಮೆ ಓದಿ ಅರ್ಥೈಸಿಕೊಳ‍್ಳಿ.                                                                                                 5 ಪರಿಕ್ಷೆ ಕೊಠಡಿಯಲ್ಲಿ ಯಾರೊಂದಿಗೂ ಮಾತನಾಡಬೇಡಿ.                                6 ಬಹುಆಯ್ಕೆ ಪ್ರಶ್ನೆಗಳಿಗೆ ಉತ್ತರಿಸುವಾಗ ಎಚ್ಚರವಾಗಿರಿ             
   7 ಉತ್ತರಗಳನ್ನು ನೇರವಾಗಿ , ನಿಖ ರವಾಗಿ ಸ್ಪಷ್ಟವಾಗಿ ಬರೆಯಿರಿ                  8 ಮುಖ್ಯವಾದ  ಅಂಶಗಳಿಗೆ ಅಂಡರ್ ಲೈನ್ ಮಾಡಿ                                          9 ಚಿತ್ರಗಳು.ಭೂಪಟಗಳು .ಮತ್ತು ರೇಖಾಚಿತ್ರಗಳನ್ನು ಸ್ಪಷ್ಟವಾಗಿ ಬರೆದು ಭಾಗಗಳನ್ನು ಗುರ್ತಿಸಿ.                                                                                       10 ಹೆಚ್ಚಿನ  ಉತ್ತರ ಹಾಳೆಗಳನ್ನು ತೆಗೆದುಕೊಂಡಿದ್ದರೆ ಅವುಗಳಿಗೆ ನಿಮ್ಮ ರಿಜಿಸ್ಟರ್ ನಂಬರ್ ಸರಿಯಾಗಿ ನಮೂದಿಸಿ ಸರಿಯಾಗಿ ಕಟ್ಟಿ  ಕೊನೆಯ 15 ನಿಮಿಷದಲ್ಲಿ ಬರೆದಿರುವ ಎಲ್ಲಾ ಪ್ರಶ್ನೆಗಳು ಮತ್ತು ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ ಕೊನೆಯಲ್ಲಿ ಕೊಠಡಿ ಮೇಲ್ವಿಚಾರಕರಿಗೆ ನೀಡಿ.                                                                           ನಿಮಗೆ ಶುಭವಾಗಲಿ                                                                               ನಿಮಗೆಲ್ಲಾ ಯಶಸ್ಸು ದೊರೆಯಲಿ                                                                                    ಸಿ.ಜಿ.ವೆಂಕಟೇಶ್ವರ.ಶಿಕ್ಷಕರು .                      ಎಸ್ .ಎಸ್ ಇ. ಎ. ಸರ್ಕಾರಿ ಪ್ರೌಢಶಾಲೆ 

29 ಆಗಸ್ಟ್ 2017

ಸೌಂದರ್ಯ ಸುಂದರಿ

ಸೌಂದರ್ಯ ಸುಂದರಿ

ಯಾರಿವಳು ಮೋಹಕ ಸುಂದರಿ
 ಇವಳ ಮೈಮಾಟ ತರಾವರಿ
ಇವಳ ಕಣ್ಣು ಸೂಜಿಮಲ್ಲೆ
ಕುಳಿತಿಹಳಲ್ಲ ಸರೋವರದ ಪಕ್ಕದಲ್ಲೇ

ಸಾಗರಿಯೋ ನಾಗಿಣಿಯೋ ತಿಳಿಯುತಿಲ್ಲ
ಇವಳ ಲಜ್ಜೆಯ ನೋಟಕೆ ಮಿತಿಯಿಲ್ಲ
ಅನುಮಾನ  ನನಗೆ ಇವಳುಎಲ್ಲೋರಾ ಶಿಲ್ಪ ?
ರಂಭಾ ಊರ್ವಶಿಯರು ಇವಳ ಮುಂದೆ ಅಲ್ಪ


ಕಾಯುತಿರಬಹುದು ಇನಿಯನ ಬರುವಿಕೆಗಾಗಿ
ಕೇಳಿ ಬರಲೇ ನಾನೀಗಲೆ  ಬೇಗನೆ ಹೋಗಿ
ಕೇಳಲೇ ಅವಳ ಏ ಕಾಂತೆ  ಏಕಾಂತವೇಕೆ?
ನಿಂದಿಸಬಹುದು ನನ್ನ ಆ ವಿಷಯ ನನಗೇಕೆ

ಕರದಲಿರುವುದು  ಕೋಮಲ ಮಯೂರ ಗರಿ
ಹಿನ್ನೆಲೆಯಲಿರುವುದು ಮೋಹಕ ಗಿರಿ
ಇವಳು ಮಯೂರಶರ್ಮನ ಪ್ರೇಯಸಿಯೋ?
ಗಿರಿರಾಜನ ಹಿರಿ ತನುಜೆಯೋ?

ನಿನ್ನಂದದಿಂದ ಸೊಬಗು ಆಭರಣಗಳಿಗೆ
ಚಂದಿರನೇ ನಾಚಿದ ನೋಡಿ ನಿನ್ನ ಹೂನಗೆ
ಕಮಲನಾಭನ ಪಟ್ಟದರಿಸಿಯೋ
ಬ್ರಹ್ಮ ದೇವನ ಹೃದಯ ವಾಸಿಯೋ

ಮಾತನಾಡಿ ಪರಿಹರಿಸು ನನ್ನ ಸಂದೇಹವ
ತಾಳಲಾರೆನು ನಾನು ಈ ನಿನ್ನ ಮೌನವ
ನೀನೇ ಪ್ರಕೃತಿ ಸೌಂದರ್ಯವೋ
ಅಥವಾ ಪ್ರಕೃತಿಯೇ ನಿನ್ನ ಸೌಂದರ್ಯವೋ?

ಸಿ.ಜಿ.ವೆಂಕಟೇಶ್ವರ
ಶಿಕ್ಷಕರು
ಗೌರಿಬಿದನೂರು

ತಾಯಿಯ ಹಾರೈಕೆ

ತಾಯಿಯ ಹಾರೈಕೆ

ಭಾರತಾಂಬೆಯ ಸೇವೆಗೈದ ಕಂದನೆ ಪವಡಿಸು ನನ್ನ ಮಡಿಲಲಿ ನಿದಿರಿಸುಕಣ್ತುಂಬ
ಎನಿತು ದಿನಗಳಾದವೋ ಸುಖ ನಿದಿರೆಗೈದು ಗಡಿಗಳ ಗೊಡವೆಯಲಿ


ಮಳೆ ಚಳಿಗಾಳಿ ಲೆಕ್ಕಿಸದೇ ಉಕ್ಕಿ ಬಹ ದೇಶಾಭಿಮಾನಕ್ಕೆ ನಿನಗೆ ನೀನೆ ಸಾಟಿ
 ನಮನ ನಿನಗೆ ನೂರು ಕೋಟಿ.


ಓ ನನ್ನ ಕಂದ ನಿನ್ನ ಕಂದನ ಗೊಡವೆ ನಿನಗೆ ಬೇಡ
ನಾನಿರುವೆನಲ್ಲಾ ಬೆಳೆಸಿ ತೋರುವೆ ನೋಡ


ಇರಬಹುದು ನಮಗೆ ಬಡತನ                     ನಮ್ಮ ತನುಮನದಲಿಹುದು ಸಿರಿತನ
ಯೋಧನಿಗೆ ದೇಶವೇ ಮನೆ ಮರಿಬೇಡ ಈ ತಾಯಿಮನೆ

ವಿಶ್ರಮಿಸದಿರು ಭಾರತಾಂಬೆಯ ಸೇವೆಗೆ ವಿಶ್ರಾಂತಿ ಮರೆಯದಿರು ಈ ತಾಯಿಯ ಮಡಿಲಿನಲಿ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

ಮಾನವರಾಗುವಿರಾ?

ಮಾನವರಾಗುವಿರಾ?

ಮಾನವರಾಗುವಿರಾ ನೀವು
 ಮಾನವಾರಾಗುವಿರಾ?
ದಾನವತೆಯ ಹೀನ ಗುಣವ ಬಿಟ್ಟು.
 ಮಾನವರಾಗುವಿರಾ?

ಅಪ್ಪ ಅಮ್ಮನನು ತಪ್ಪದೆ ಪೂಜಿಸಿ
ತಪ್ಪು ಒಪ್ಪುಗಳ ಲೆಕ್ಕವ ಇಟ್ಟು
ಅಪ್ಪಿ ಮುದ್ದಾಡಿ ಸಲಹಿ ಅವರ //

ಅನ್ನ ದಾನವ ಮಾಡುವರಾಗಿ
ಅನ್ನ ಪೋಲನು ಇಂದೇ ನಿಲ್ಲಿಸಿ
ಇನ್ನು ಅನ್ನದ ಬೆಲೆಯನು ತಿಳಿಯಿರಿ//

ಪರಿಸರ ರಕ್ಷಣೆ ಮಾಡುವರಾಗಿ
ಪರಿ ಪರಿ ಮರಗಿಡ ಇಂದೇ ನೆಡಿರಿ
ಪರರ ಹಿತವನು ಅನುದಿನ ನೆನೆಯಿರಿ//

ಪ್ರಾಣಿ ಪಕ್ಷಿಗಳ ಮೇಲೆ ಕರುಣಿಸಿ
ಪ್ರಾಣದ ಬೆಲೆಯನು ತಪ್ಪದೆ ತಿಳಿಯಿರಿ
ಪರಹಿತ ಪರಮಾತ್ಮ ಎಂಬುದ ತಿಳಿಯಿರಿ //

ಜಾತಿ ಭೇಧದ ಬೀಜವ ಬಿತ್ತದೇ
ನೀತಿ ನೇಮದಿ ಜನರಲಿ ಬೆರೆಯುತ
ಪ್ರೀತಿಯಿಂದ ಎಲ್ಲರಲಿ ಬೆರೆ ನೀ //

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು