ದೇಶಭಕ್ತಿ ಗೀತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ದೇಶಭಕ್ತಿ ಗೀತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

06 ಜೂನ್ 2020

ಹೆಮ್ಮೆಯ ಭಾರತೀಯರು ( ದೇಶ ಭಕ್ತಿ ಗೀತೆ)

*ಹೆಮ್ಮೆಯ ಭಾರತೀಯರು*

ಜಗಕೆ ಮಾದರಿ ಇಂದು
ನನ್ನಯ ಭಾರತ
ಯುಗದ ಹಿರಿಮೆಯ
ಕಂಡಿದೆ ಇದು ನನ್ನ ಭಾರತ

ಸುತ್ತಲ ಶತೃಗಳ
ಎದೆಗಳ ನಡುಗಿಸಿದೆ
ಕೊತ್ತಲ ಕೋಟೆಗಳಿಲ್ಲದೆ
ಜನರಿಗೆ ರಕ್ಷಣೆ ನೀಡಿದೆ.

ಜ್ಞಾನದಲಿ ವಿಜ್ಞಾನದಿ
ಅಪರಿಮಿತ ಸಾಧನೆ ತೋರಿದೆ
ದಾಸ್ಯ ಸಂಕೋಲೆಯ ಕಳಚಿ
ಸ್ವಾಭಿಮಾನದ ಬಾಳು ನೀಡಿದೆ.

ಕೃಷಿಯು, ಉದ್ದಿಮೆ, ಸೇವೆಗೆ
ಭಾರತ ಹೆಸರುವಾಸಿ ಆಗುತಿದೆ
ಪ್ರಗತಿಯ ಪಥದಲಿ ನಾವೇ
ಮುಂದು ಎಂದು ಸಾಗುತಿದೆ.

ಗುರಿ ಇರುವ ಜನರಿಹರು
ಗುರುವಾಗಿ ಬೆಳೆಯುವರು
ವಿಶ್ವ ಗುರು ನಮ್ಮಮ್ಮ
ಎಂದು ಘರ್ಜಿಸುವರು.

ಸಿ ಜಿ ವೆಂಕಟೇಶ್ವರ
ತುಮಕೂರು