ಭೂತಾನ್ ಪ್ರವಾಸ
ಬಾಗ್ಡೋಗ್ರಾ ವಿಮಾನ ನಿಲ್ದಾಣ.
ಬಾಗ್ಡೋಗ್ರಾ ವಿಮಾನ ನಿಲ್ದಾಣ. ಹೌದು ನನಗೂ ಮೊದಲು ಉಚ್ಚರಿಸಲು ಕಷ್ಟವಾದ ಹೆಸರು.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗಿನ ಜಾವ ಹೊರಟ ನಮ್ಮ ಆಕಾಸ ಏರ್ಲೈನ್ ಪಶ್ಚಿಮ ಬಂಗಾಳದ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಮುನ್ನ ಸಾವಿರಾರು ಕಿಲೋಮೀಟರ್ ಪಯಣ ಮಾಡಿದ್ದೆವು. ಭೂತಾನ್ ಪ್ರವಾಸ ಕೈಗೊಳ್ಳಲು ನಾವು ಈ ವಿಮಾನ ನಿಲ್ದಾಣದಲ್ಲಿ ಇಳಿದು ರಸ್ತೆ ಮೂಲಕ ಹಸಿಮರ ಪುಟ್ಶಿಲಾಂಗ್ ಮೂಲಕ ಭೂತಾನ್ ಪ್ರವೇಶ ಮಾಡಲು ಪ್ಲಾನ್ ಮಾಡಿ ಹೊರಟಿದ್ದೆವು. ಬೆಳಗಿನ 8 ಗಂಟೆಗೆ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ನಾವು ಲ್ಯಾಂಡ್ ಆಗುತ್ತೇವೆ.ವಿಮಾನ ನಿಲ್ದಾಣದಲ್ಲಿ ಪೋಟೋ ವೀಡಿಯೋ ಮಾಡಬೇಡಿ ಎಂದು ಗಗನ ಸಖಿ ಹೇಳಿದರು.
ಬಾಗ್ಡೋಗ್ರಾ ವಿಮಾನ ನಿಲ್ದಾಣ ಪಶ್ಚಿಮ ಬಂಗಾಳದ ಸಿಲಿಗುರಿ ನಗರಕ್ಕೆ ಸೇವೆ ಸಲ್ಲಿಸುವ ಕಸ್ಟಮ್ಸ್ ವಿಮಾನ ನಿಲ್ದಾಣವಾಗಿದೆ. ಇದು ಭಾರತೀಯ ವಾಯುಪಡೆಯ ಬಾಗ್ಡೋಗ್ರಾ ವಾಯುಪಡೆ ನಿಲ್ದಾಣದಲ್ಲಿ ನಾಗರಿಕ ಎನ್ಕ್ಲೇವ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಡಾರ್ಜಿಲಿಂಗ್, ಗ್ಯಾಂಗ್ಟಾಕ್, ಕುರ್ಸಿಯೊಂಗ್, ಕಾಲಿಂಪಾಂಗ್, ಮಿರಿಕ್ ಮತ್ತು ಉತ್ತರ ಬಂಗಾಳ ಪ್ರದೇಶದ ಇತರ ಭಾಗಗಳು ಮತ್ತು ಈಶಾನ್ಯ ಬಿಹಾರದ ಗಿರಿಧಾಮಗಳಿಗೆ ಪ್ರವೇಶ ದ್ವಾರವಾಗಿದೆ. ಭಾರತ ಸರ್ಕಾರವು 2002 ರಲ್ಲಿ ಈ ವಿಮಾನ ನಿಲ್ದಾಣಕ್ಕೆ ಸೀಮಿತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾನಮಾನವನ್ನು ನೀಡಿದೆ. ಬ್ಯಾಂಕಾಕ್-ಸುವರ್ಣಭೂಮಿ ಮತ್ತು ಪಾರೋಗೆ ಸೀಮಿತ ಅಂತರರಾಷ್ಟ್ರೀಯ ಕಾರ್ಯಾಚರಣೆಗಳೊಂದಿಗೆ ಇದು ಪಶ್ಚಿಮ ಬಂಗಾಳದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ.
ಹಾಗೂ ಭಾರತದ 17 ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ. ಇದು ವಾಯುಯಾನ ಟರ್ಬೈನ್ ಇಂಧನದ ಮೇಲೆ ಶೂನ್ಯ ಮಾರಾಟ ತೆರಿಗೆಯನ್ನು ಹೊಂದಿರುವ ಭಾರತದ ಕೆಲವೇ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಈ ವಿಮಾನ ನಿಲ್ದಾಣವು 13 ವಿಮಾನ ನಿಲ್ದಾಣಗಳಿಗೆ ಮಾರ್ಗಗಳನ್ನು ಹೊಂದಿದೆ ಮತ್ತು 3 ದೇಶಗಳಿಗೆ ಭಾರತ , ಭೂತಾನ್ ಮತ್ತು ಥೈಲ್ಯಾಂಡ್ ಸಂಪರ್ಕ ಕಲ್ಪಿಸುತ್ತದೆ.
ವಿಮಾನ ನಿಲ್ದಾಣ ತಲುಪಿ ಅಲ್ಲೇ ಪ್ರೇಶ್ ಅಪ್ ಆಗಿ ಹೊರಬಂದ ನಮ್ಮ ತಂಡವನ್ನು ನಮ್ಮ ಟೂರ್ ಮೇನೇಜರ್ ಪ್ರಕಾಶ್ ಸ್ವಾಗತಿಸಿ ತಿನ್ನಲು ಪುರಿ ಮತ್ತು ಸಾಗು ಕೊಟ್ಟರು.ಮುದ್ದೆ ಅನ್ನ ತಿನ್ನುವ ನಮಗೆ ಪುರಿ ಸಾಗು ಅಷ್ಟು ರುಚಿಸಲಿಲ್ಲ. ನಮಗಾಗಿ ಸಿದ್ದವಾಗಿದ್ದ ಎರಡು ಮಿನಿ ಬಸ್ ಏರಿ ಜೈಗಾನ್ ಕಡೆ ಪಯಣ ಮುಂದುವರೆಸಿದೆವು.
No comments:
Post a Comment