ಚಿಕ್ಕ ವಯಸ್ಸಿನಲ್ಲಿ ಹರ್ಯಾಣ ದ ಕರ್ನಾಲ್ ನಲ್ಲಿ ರಾತ್ರಿ ಅಂಗಳದಲ್ಲಿ ತನ್ನ ಕುಟುಂಬದ ಜೊತೆಯಲ್ಲಿ ಮಲಗಿದ್ದಾಗ ನಕ್ಷತ್ರ ಎಣಿಸುವ ಕೆಲಸ ಮಾಡದೇ ಆ ನಕ್ಷತ್ರಗಳಿರುವ ಕಡೆ ತನ್ನ ಗುರಿ ನೆಟ್ಟು ಅದರಲ್ಲಿ ಯಶಸ್ಸು ಕಂಡು ಬಾಹ್ಯಾಕಾಶಕ್ಕೆ ನೆಗೆದು ಸಾಹಸ ಮಾಡಿ ಕೊನೆಗೆ ಬಾಹ್ಯಾಕಾಶದಲ್ಲೇ ಮರಣ ಹೊಂದಿ ನಕ್ಷತ್ರವಾದ ನಕ್ಷತ್ರವೇ ಕಲ್ಪನಾ ಚಾವ್ಲಾ! ಇಂದು ಅವರ ಹುಟ್ಟಿದ ದಿನ ಕೋಟ್ಯಾಂತರ ಬಾಹ್ಯಾಕಾಶ ಪ್ರಿಯರ ಸ್ಪೂರ್ತಿ ನಮ್ಮ ಕಲ್ಪನಾ ಚಾವ್ಲ.
ಕಲ್ಪನಾ ಚಾವ್ಲಾ ಮಾರ್ಚ್ 17 ರ 1962ರಲ್ಲಿ ಜನಿಸಿದ ಅವರು ಗಗನಯಾತ್ರಿಯಾಗಿ ಬಾಹ್ಯಾಕಾಶ ಎಂಜಿನಿಯರ್ ಆಗಿ ಅವರು ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು. ಚಾವ್ಲಾ ಚಿಕ್ಕ ವಯಸ್ಸಿನಿಂದಲೂ ಬಾಹ್ಯಾಕಾಶ ಎಂಜಿನಿಯರಿಂಗ್‌ನಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದರು ಮತ್ತು ಭಾರತದ ದಯಾಳ್ ಸಿಂಗ್ ಕಾಲೇಜು ಮತ್ತು ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಯುನೈಟೆಡ್ ಸ್ಟೇಟ್ಸ್‌ಗೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರು ತಮ್ಮ ಎಂಎಸ್ಸಿ ಮತ್ತು ಪಿಎಚ್‌ಡಿ ಗಳಿಸಿದರು, ೧೯೯೦ ರ ದಶಕದ ಆರಂಭದಲ್ಲಿ ನೈಸರ್ಗಿಕ ಯುನೈಟೆಡ್ ಸ್ಟೇಟ್ಸ್ ನಾಗರಿಕರಾದರು.
ನಾಸಾ ಸೇರಿ ಮೊದಲ ಗಗನಯಾನ ಯಶಸ್ವಿಯಾಗಿ ಪೂರೈಸಿ ಎರಡನೇ ಗಗನಯಾನದಲ್ಲಿ ತನ್ನ ಆರು ಜನ ಸಹ ಯಾತ್ರಿಗಳೊಂದಿಗೆ ಅಕಾಲ ಮರಣ ಹೊಂದಿದರು.
ಕಲ್ಪನಾ ರ ಸಾಧನೆಯನ್ನು ಎಲ್ಲರೂ ಪ್ರಶಂಸಿಸೋಣ.
#ಕಲ್ಪನಾ #ಚಾವ್ಲಾ #kalpana @highlight CgVenkateshwara Cg #KalpanaChawla #kalpanachavla #NASA #NasaSpaceAppsChallenge
No comments:
Post a Comment