ಜ್ಞಾನಂ ಭಾರತಂ ಮಿಷನ್.
ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಹೆಚ್ಚು ಚರ್ಚೆ ಆದ ವಿಷಯ ಹಾಗೂ ಸಂತಸಕ್ಕೆ ಕಾರಣವಾದ ವಿಷಯ ಐಟಿಯಲ್ಲಿ ವಿನಾಯಿತಿ.ನಿಜಕ್ಕೂ ಇದು ಮದ್ಯಮ ವರ್ಗದ ನಮ್ಮಂತವರಿಗೆ ಉತ್ತಮ ನೀತಿ ಎಂಬುದರಲ್ಲಿ ಸಂಶಯವಿಲ್ಲ. ಈ ಬಜೆಟ್ ನಲ್ಲಿ ನನಗೆ ಸಂತಸ ಕೊಟ್ಟ ಮತ್ತೊಂದು ವಿಷಯ ಎಂದರೆ
ಭಾರತದ ಪ್ರಾಚೀನ ಜ್ಞಾನವನ್ನು ರಕ್ಷಿಸಲು ಹೊಸ 'ಜ್ಞಾನ ಭಾರತಂ ಮಿಷನ್' ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ದಾಖಲಿಸಬೇಕು ಮತ್ತು ಸಂರಕ್ಷಿಸಬೇಕು ಎಂಬ ಉದ್ದೇಶದಿಂದ ಹಮ್ಮಿಕೊಂಡ ಯೋಜನೆ.
2025-26 ರ ಕೇಂದ್ರ ಬಜೆಟ್‌ನಲ್ಲಿ, ಹಣಕಾಸು ಸಚಿವೆರವರು ಜ್ಞಾನ ಭಾರತಂ ಮಿಷನ್ ಅನ್ನು ಪರಿಚಯಿಸಿದರು.ಇದರ ಅಡಿಯಲ್ಲಿ ಒಂದು ಕೋಟಿ ಹಸ್ತಪ್ರತಿಗಳನ್ನು ಸಂರಕ್ಷಿಸಿ ದಾಖಲಿಸಲಾಗುತ್ತದೆ.
ಈ ಉಪಕ್ರಮವು ಭಾರತದ ವಿಶಾಲ ಬೌದ್ಧಿಕ ಪರಂಪರೆಯನ್ನು ರಕ್ಷಿಸಲು ಮತ್ತು ಹೆಚ್ಚಿಸಲು ಪ್ರಯತ್ನಿಸುತ್ತದೆ ಮತ್ತು ಈ ಕ್ರಮವು ಪ್ರಸ್ತುತ ಸರ್ಕಾರದ ವಿಶಾಲ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದೊಂದಿಗೆ ಪ್ರಾಚೀನ ಜ್ಞಾನವನ್ನು ಸಂಯೋಜಿಸುತ್ತದೆ.
ಈ ಯೋಜನೆಯ ಅಂಗವಾಗಿ
ಶೈಕ್ಷಣಿಕ ಸಂಸ್ಥೆಗಳು, ವಸ್ತು ಸಂಗ್ರಹಾಲಯಗಳು, ಗ್ರಂಥಾಲಯಗಳು ಮತ್ತು ಖಾಸಗಿ ಸಂಗ್ರಾಹಕರೊಂದಿಗೆ ನಮ್ಮ ಹಸ್ತಪ್ರತಿ ಪರಂಪರೆಯ ಸಮೀಕ್ಷೆ, ದಾಖಲೀಕರಣ ಮತ್ತು ಸಂರಕ್ಷಣೆಗಾಗಿ ಜ್ಞಾನ ಭಾರತಂ ಮಿಷನ್ ಅನ್ನು 1 ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ಒಳಗೊಳ್ಳಲು ಕೈಗೊಳ್ಳಲಾಗುತ್ತದೆ.
ಜ್ಞಾನ ಹಂಚಿಕೆಗಾಗಿ ಭಾರತೀಯ ಜ್ಞಾನ ವ್ಯವಸ್ಥೆಗಳ ರಾಷ್ಟ್ರೀಯ ಡಿಜಿಟಲ್ ಭಂಡಾರವನ್ನು (ಐಕೆಎಸ್) ಸ್ಥಾಪಿಸುವ ಯೋಜನೆಯನ್ನು ಸಹ ಈ ಬಜೆಟ್ ನಲ್ಲಿ ಪ್ರಸ್ತಾಪಿಸಿರುವುದು ಶ್ಲಾಘನೀಯ.
ಭಾರತದ ರಾಷ್ಟ್ರೀಯ ಆರ್ಕೈವ್ಸ್ ತನ್ನ ವ್ಯಾಪಕವಾದ ದಾಖಲೆಗಳು ಮತ್ತು ಹಸ್ತಪ್ರತಿಗಳ ಸಂಗ್ರಹವನ್ನು ಡಿಜಿಟಲೀಕರಣಗೊಳಿಸುವ ಮೂಲಕ ಈ ಸಾಂಸ್ಕೃತಿಕ ಪ್ರಯತ್ನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ತನ್ಮೂಲಕ ಭವಿಷ್ಯದ ಪೀಳಿಗೆಗೆ ಅವುಗಳನ್ನು ಸಂರಕ್ಷಿಸಿ ನೀಡಲು
ಸಹಾಯಕವಾಗಲಿದೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
No comments:
Post a Comment