ಹೊಸ ಕ್ಯಾಲೆಂಡರ್ ವರ್ಷದಲ್ಲಿ ಹೊಸದನ್ನು ಸಾಧಿಸೋಣ...
ಈ ವರ್ಷ ಅಟಾಮಿಕ್ ಹ್ಯಾಬಿಟ್ ಎಂಬ ಪುಸ್ತಕ ಓದಿದೆ.ನನ್ನ ಮಗಳು ಸಹ ಆ ಪುಸ್ತಕ ಇಷ್ಟ ಪಟ್ಟು ಮತ್ತೆ ಮತ್ತೆ ಓದುತ್ತಿದ್ದಾಳೆ.
ಈ ಪುಸ್ತಕದ ತಿರುಳು ಇಷ್ಟೇ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ಜೀವನದಲ್ಲಿ ಅದ್ಭುತ ಸಾಧಿಸಬಹುದು.
ಮುಂಬರುವ 2025 ರಲ್ಲಿ ನಾವೆಲ್ಲರೂ ಸಣ್ಣ ಬದಲಾವಣೆ ಮಾಡಿಕೊಂಡು ನಮ್ಮ ಸಾಧನೆಗೆ ಮುನ್ನುಡಿ ಬರೆಯೋಣ.
ಆಸೆಗಳನ್ನು ಗುರಿಗಳಾಗಿ ಬದಲಾಯಿಸಿಕೊಳ್ಳೋಣ.
ಆಲ್ಕೋಹಾಲ್ ನಿಂದ ನೀರಿಗೆ ಬದಲಾಯಿಸಿಕೊಳ್ಳೋಣ.
ಖರ್ಚನ್ನು ಕಡಿಮೆ ಮಾಡಿ ಉಳಿತಾಯ ಮಾಡೋಣ.
ಟಿ ವಿ ನೋಡುವುದನ್ನು ಕಡಿಮೆ ಮಾಡಿ ಪುಸ್ತಕ ಹೆಚ್ಚು ಓದೋಣ.
ಭಯ ಪಡುವುದನ್ನು ಬಿಟ್ಟು ಸಾಧಿಸಿವ ಸಂಕಲ್ಪ ಮಾಡೋಣ.
ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ ಕೆಲಸ ಮಾಡಲು ಪ್ರಯತ್ನ ಮಾಡೋಣ.
ವಿಷಕಾರಿ ಸ್ನೇಹಿತರ ಸೋಗಿನಲ್ಲಿರುವ ಹಿತ ಶತ್ರುಗಳ ಬದಲಿಗೆ ನಮ್ಮ ಮಾರ್ಗದರ್ಶನ ಮಾಡುವವರ ಜೊತೆಯಲ್ಲಿ ಕಾಲ ಕಳೆಯೋಣ.
ದೂರುವುದನ್ನು ನಿಲ್ಲಿಸಿ ಕೃತಜ್ಞತೆ ತೋರೋಣ.
ಹಗಲುಗನಸು ಕಾಣುವುದನ್ನು ನಿಲ್ಲಿಸೋಣ ಕನಸು ನನಸಾಗಿಸಲು ಪ್ರಯತ್ನ ಮಾಡೋಣ.
ಸಣ್ಣ ಬದಲಾವಣೆಗಳನ್ನು ಮಾಡಿಕೊಂಡು ಮುಂಬರುವ ಕ್ಯಾಲೆಂಡರ್ ವರ್ಷದಲ್ಲಿ ನಾವು ಹೇಗೆ ದೊಡ್ಡ ಫಲಿತಾಂಶಗಳನ್ನು ಪಡೆಯೋಣ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು.
No comments:
Post a Comment