#ಬಿರ್ಸಾಮುಂಡಾ_ಜಯಂತಿ
"ಅಬುವಾ ರಾಜ್ ಅತೆ ಜನ, ಮಹಾರಾಣಿ ರಾಜ್ ತುಂಡು ಜನ" ಇದು ಬಿರ್ಸಾ ಬುಡಕಟ್ಟು ಭಾಷೆಯ ವಾಕ್ಯ. "ರಾಣಿಯ ಆಡಳಿತವನ್ನು ರದ್ದುಗೊಳಿಸಿ ನಮ್ಮ ಆಡಳಿತವನ್ನು ಸ್ಥಾಪಿಸಿ" ಎಂಬ ಅರ್ಥದ ಘೋಷವಾಕ್ಯ ನೀಡಿದ, ನಮ್ಮ ರಾಜ್ಯ, ನಮ್ಮ ಆಡಳಿತ ಎಂದು ಗುಡುಗಿದ, ಜಾರ್ಖಂಡ್ ಭೂಮಿಯಿಂದ ಬಂದ ಭಾರತೀಯ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಲಕ್ಷಾಂತರ ಬುಡಕಟ್ಟು ಜನರಿಗೆ ಸ್ಫೂರ್ತಿಯ ಚೇತನವೇ ಬಿರ್ಸಾ ಮುಂಡ!
ಇಂದು ಬಿರ್ಸಾ ಮುಂಡಾ ರವರ 150 ನೇ ಜಯಂತಿ. ಪ್ರಕೃತಿ ಪ್ರೇಮಕ್ಕೆ ಈ ವ್ಯಕ್ತಿ ನಿದರ್ಶನವಾಗಿದ್ದು, ನೀರು, ಕಾಡು, ಭೂಮಿ ಎಂದಾಗ ಇಂದಿಗೂ ಜನ ಇವರನ್ನು ನೆನಪಿಸಿಕೊಳ್ಳುತ್ತಾರೆ.
ಬಿರ್ಸಾ ಮುಂಡಾ ಯುವ ಸ್ವಾತಂತ್ರ್ಯ ಹೋರಾಟಗಾರ ಮತ್ತು ಬುಡಕಟ್ಟು ಸಮುದಾಯದ ನಾಯಕ. ಬಿರ್ಸಾ ಮುಂಡಾ ಮುಂಡಾ ಬುಡಕಟ್ಟಿಗೆ ಸೇರಿದವರು. ಅವರು 1875 ರ ನವೆಂಬರ್ 15 ರಂದು ಜಾರ್ಖಂಡ್ನಲ್ಲಿ ಜನಿಸಿದರು . ಬಿರ್ಸಾ 'ಉಲ್ಗುಲಾನ್' ಅಥವಾ 'ದಿ ಗ್ರೇಟ್ ಟುಮಲ್ಟ್' ಎಂಬ ಚಳವಳಿಯನ್ನು ಆರಂಭಿಸಿದರು. ಆ ಸಮಯದಲ್ಲಿ ಜನರು ಅವರನ್ನು "ಧರ್ತಿ ಅಬ್ಬಾ" ಎಂದು ಕರೆಯುತ್ತಿದ್ದರು, ಅಂದರೆ "ಭೂಮಿಯ ತಂದೆ". ಅವರು ಬ್ರಿಟಿಷ್ ಮಿಷನರಿಗಳು ಮತ್ತು ಅವರ ಮತಾಂತರ ಚಟುವಟಿಕೆಗಳ ವಿರುದ್ಧ ಪ್ರಮುಖ ಧಾರ್ಮಿಕ ಚಳುವಳಿಯನ್ನು ರಚಿಸಿದರು. ಮುಖ್ಯವಾಗಿ ಮುಂಡಾ ಮತ್ತು ಓರಾನ್ ಬುಡಕಟ್ಟು ಸಮುದಾಯಗಳ ಜನರ ಸಹಾಯದಿಂದ ಕ್ರಿಶ್ಚಿಯನ್ ಮಿಷನರಿಗಳ ಧಾರ್ಮಿಕ ಪರಿವರ್ತನೆ ಚಟುವಟಿಕೆಗಳ ವಿರುದ್ಧ ಅವರು ಬಂಡಾಯವೆದ್ದರು. ನೀರು, ಅರಣ್ಯ, ಭೂಮಿ ಮತ್ತು ಆದಿವಾಸಿಗಳಿಗೆ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ.
ಬಿರ್ಸಾ ಮುಂಡಾ ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಆಂದೋಲನ ನಡೆಸಿದ್ದರು. ಜಮೀನ್ದಾರಿ ಪದ್ಧತಿ ಮತ್ತು ಬ್ರಿಟಿಷರ ಆಡಳಿತದ ವಿರುದ್ಧ ದೊಡ್ಡ ಹೋರಾಟ ನಡೆಸಿದರು. ಬಿರ್ಸಾ ಮುಂಡಾ ಆದಿವಾಸಿಗಳಿಗೆ ನೀರು, ಕಾಡುಗಳನ್ನು ರಕ್ಷಿಸಲು ಸ್ಫೂರ್ತಿ ನೀಡಿದರು ಮತ್ತು ಉಲ್ಗುಲಾನ್ ಎಂಬ ಚಳವಳಿಯನ್ನು ಪ್ರಾರಂಭಿಸಿದರು. ಈ ಚಳುವಳಿ ಬ್ರಿಟಿಷ್ ಆಡಳಿತ ಮತ್ತು ಮಿಷನರಿಗಳ ವಿರುದ್ಧವಾಗಿತ್ತು.
ಬಿರ್ಸಾ ಮುಂಡಾ ರವರು "ಅಬುವಾ ಡಿಶುಂ ಅಬುವಾ ರಾಜ್" ಎಂಬ ಘೋಷಣೆಯನ್ನು ನೀಡಿದ್ದರು. ಅವರು ಅಬುವಾ ರಾಜ್ ಅತೆ ಜನ, ಮಹಾರಾಣಿ ರಾಜ್ ತುಂಡು ಜನ" ಅಂದರೆ "ರಾಣಿಯ ಆಡಳಿತವನ್ನು ರದ್ದುಗೊಳಿಸಿ ನಮ್ಮ ಆಡಳಿತವನ್ನು ಸ್ಥಾಪಿಸಿ" ಎಂದು ಹೇಳಿದರು. ನಮ್ಮ ರಾಜ್ಯ, ನಮ್ಮ ಆಡಳಿತ ಎಂದರ್ಥ. ಇದು ಜಾರ್ಖಂಡ್ ಭೂಮಿಯಿಂದ ಬಂದ ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಲಕ್ಷಾಂತರ ಬುಡಕಟ್ಟು ಜನರಿಗೆ ಸ್ಫೂರ್ತಿಯ ಮೂಲವಾಗಿತ್ತು.
ಬಿರ್ಸಾ ಮುಂಡಾರವರು ಇನ್ನೂ ಹಲವಾರು ಘೋಷಣೆ ನೀಡಿ ಅವುಗಳನ್ನು ಕಾರ್ಯರೂಪಕ್ಕೆ ತರಲು ಬಹಳ ಶ್ರಮಿಸಿದರು. ಅವರ ಇತರೆ ಘೋಷಣೆಗಳೆಂದರೆ
"ವಿಜಯವು ಹೋರಾಟದ ಮೂಲಕ ಮಾತ್ರ ಬರುತ್ತದೆ, ಶರಣಾಗತಿಯ ಮೂಲಕ ಅಲ್ಲ."
"ನಮ್ಮ ಮಾತೃಭೂಮಿಯನ್ನು ರಕ್ಷಿಸುವುದು ನಮ್ಮ ಕರ್ತವ್ಯ."
"ಶಿಕ್ಷಣ, ಹೋರಾಟ ಮತ್ತು ಏಕತೆಯ ಮೂಲಕ ಮಾತ್ರ ನಾವು ನಮ್ಮ ಹಕ್ಕುಗಳನ್ನು ಸಾಧಿಸಬಹುದು."
ಬಿರ್ಸಾ ಮುಂಡಾರವರ 150ನೇ ಜನ್ಮ ದಿನದ ಪ್ರಯುಕ್ತ ಸರ್ಕಾರಗಳು ದೇಶಾದ್ಯಂತ ಅವರ ಜಯಂತಿ ಆಚರಿಸುವ ಮೂಲಕ ಗೌರವ ಸೂಚಿಸುತ್ತಿರುವುದು ಬಹಳ ಉತ್ತಮ ಕಾರ್ಯ. ಇದರ ಜೊತೆಯಲ್ಲಿ ದೇಶಾದ್ಯಂತ ಶಾಲಾ ಕಾಲೇಜುಗಳಲ್ಲಿ ಮುಂಡಾರವ ಬಗ್ಗೆ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಯುವ ಜನರಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ತುತ್ಯಾರ್ಹ.
ಇಂತಹ ಮಹಾನ್ ಚೇತನಕ್ಕೆ ನಾವು ಇಂದು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಾ ನಮ್ಮ ಸ್ವಾತಂತ್ರ್ಯ ಹೋರಾಟಕ್ಕಾಗಿ ಮಡಿದ ಸಾವಿರಾರು ಹುತಾತ್ಮರ ನೆನಯೋಣ..
ಸಿಹಿಜೀವಿ ವೆಂಕಟೇಶ್ವರ
ತುಮಕೂರು.
#sihijeeviVenkateshwara
#ಬಿರ್ಸಾಮುಂಡ #BirsaMunda #BirsaMundaJayanti #JanjatiyaGauravDiwasv
No comments:
Post a Comment