30 June 2024

ಸಿನಿಮಾ ಟಿಕೆಟ್ ಕಲೆಕ್ಟರ್ ಟು ಡಿಸ್ಟ್ರಿಕ್ಟ್ ಕಲೆಕ್ಟರ್

 


ಸಿನಿಮಾ ಟಿಕೆಟ್ ಕಲೆಕ್ಟರ್ ಟು ಡಿಸ್ಟ್ರಿಕ್ಟ್ ಕಲೆಕ್ಟರ್.


ಆತ ಚೆನ್ನೈನ ಪ್ರಖ್ಯಾತ ಸತ್ಯಂ   ಸಿನಿಮಾಸ್ ಎಂಬ ಥಿಯೇಟರ್ ನಲ್ಲಿ ತಿಂಗಳಿಗೆ ಮೂರು ಸಾವಿರ ರೂಪಾಯಿಗಳ ಸಂಪಾದನೆ ಮಾಡುವ ಉದ್ಯೋಗ ಮಾಡಿದರು.ಅದನ್ನು ತೊರೆದು  ಒಂದು ಚಿಕ್ಕ ಹೋಟೆಲ್ ನಲ್ಲಿ ಹೊಟ್ಟೆ ಪಾಡಿಗಾಗಿ  ಸರ್ವರ್ ಆಗಿ ಸೇವೆ ಸಲ್ಲಿಸುತ್ತಾ ಛಲದಿಂದ ಓದಿ ತಾನಂದುಕೊಂಡ ಮಹೋನ್ನತ ಗುರಿ ಸಾಧಿಸಿದ. ಇಂದು I A S ಅಧಿಕಾರಿಯಾಗಿ ಸಾವಿರಾರು ಜನರಿಗೆ ಸರ್ವ್ ಮಾಡುವ ವ್ಯಕ್ತಿಯಾಗಿ ಬೆಳೆದಿದ್ದಾರೆ. ಸಿನಿಮಾ ಮಂದಿರದಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದವರು ಇಂದು ಡಿಸ್ಟ್ರಿಕ್ಟ್‌ ಕಲೆಕ್ಟರ್ ಆಗಿದ್ದಾರೆ. ಅವರೇ ಕೆ ಜಯ್ ಗಣೇಶ್ !


ಸಾಧಿಸುವವನಿಗೆ ಸಾಧಿಸುವ ಛಲ, ಶ್ರಮ ಆಸಕ್ತಿ ಇದ್ರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಈ ವ್ಯಕ್ತಿಯೇ  ಉದಾಹರಣೆ. ಮನೆಯಲ್ಲಿ ಬಡತನ ಮನೆಯ ಜವಾಬ್ದಾರಿಯನ್ನು ಹೊಂದಿದ್ದರೂ   ಲೈಫ್ ನಲ್ಲಿ ಏನನ್ನಾದ್ರೂ ಸಾಧಿಸಬೇಕು ಈ ಬಡತನದಿಂದ ಹೊರಬರಬೇಕು ನನ್ನ ಫ್ಯಾಮಿಲಿ ಜೊತೆ ನಾಲ್ಕು ಜನಕ್ಕೆ ಅನುಕೂಲವಾಗುವಂತ ಕೆಲಸ ಏನಾದ್ರು ಮಾಡಬೇಕು ಎಂಬುದಾಗಿ ಅಂದುಕೊಂಡು ಕಷ್ಟ ಪಟ್ಟು ಓದಿ UPSC ಪರೀಕ್ಷೆಯಲ್ಲಿ ಪಾಸ್ ಆಗಿ ಇವತ್ತು IAS ಅಧಿಕಾರಿಯಾಗಿದ್ದಾರೆ.

 ಮೂಲತಃ ತಮಿಳುನಾಡಿನವರಾದ ಇವರು ಆರು ಬಾರಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ವಿಫಲತೆ ಅನುಭವಿಸಿದರೂ ಛಲ ಬಿಡದ ತ್ರಿವಿಕ್ರಮನಂತೆ ಏಳನೇ ಬಾರಿಗೆ  156 ನೇ ಸ್ಥಾನ ಪಡೆದು ದೇಶದ ಅತ್ಯುನ್ನತ ನಾಗರಿಕ ಸೇವೆ ಸೇರಿದ್ದಾರೆ. ಹೌದು ಯಾವುದೇ ಕೋಚಿಂಗ್ ಇಲ್ಲದೆ ಹೋಟೆಲ್ ನಲ್ಲಿ ಸಪ್ಲೈಯರ್ ಕೆಲಸ ಮಾಡುವ ಜೊತೆಗೆ UPSC ಪರೀಕ್ಷೆ ತಯಾರಿ ನಡೆಸುತ್ತಿದ್ದರು. 

UPSC ಪರೀಕ್ಷೆಯಲ್ಲಿ ಪಾಸ್ ಆಗುವುದು ಅಷ್ಟು ಸುಲಭದ ಮಾತಲ್ಲ ಯಾಕೆಂದರೆ ಈ ಪರೀಕ್ಷೆಯನ್ನು ಲಕ್ಷಾಂತರ ಮಂದಿ ಬರೆಯುತ್ತಾರೆ. ಅದರಲ್ಲೂ ಬಡತನದಿಂದ ಬಂದ ಈ ಜೈ ಗಣೇಶ್ ಅವರಿಗೆ ಇನ್ನೂ ಕಷ್ಟದ ಹಾದಿಯಾಗುತ್ತದೆ. ಕೆ.ಜಯಗಣೇಶ್  ಅವರು ವೆಲ್ಲೂರಿನ ತಂತೈ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ತಮ್ಮ ಬಿ.ಟೆಕ್ ಪದವಿಯನ್ನು ಪೂರ್ಣಗೊಳಿಸಿದರು. ಅವರು ತಮ್ಮ ನಾಲ್ಕು ಒಡಹುಟ್ಟಿದವರಲ್ಲಿ ಹಿರಿಯರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದ ಜವಾಬ್ದಾರಿಯೂ ಅವರ ಮೇಲಿತ್ತು.

ಕೆ.ಜೈಗಣೇಶ್ ಅವರು ತಮ್ಮ ಗ್ರಾಮದಲ್ಲಿ ಮೂರು ಬಾರಿ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಸಲ್ಲಿಸಿದರು ಆದರೆ ಮೂರು ಬಾರಿ ಅನುತ್ತೀರ್ಣರಾದ ನಂತರ ಅವರು ತಮ್ಮ ಹಳ್ಳಿಯನ್ನು ತೊರೆದು ಚೆನ್ನೈಗೆ ಹೋಗಬೇಕು ಎಂದು ಅರಿತುಕೊಂಡರು ಮತ್ತು ಅಲ್ಲಿಂದ ಅವರು ತಮ್ಮ ಸಿದ್ಧತೆಯನ್ನು ಚುರುಕುಗೊಳಿಸಿದರು. ಈ ಪರಿಸ್ಥಿತಿಯಲ್ಲಿ ಅಣ್ಣಾನಗರ ತಲುಪಿ ಅಖಿಲ ಭಾರತ ಸರ್ಕಾರಿ ಸಂಸ್ಥೆಯಲ್ಲಿ ಐಎಎಸ್ ಪ್ರವೇಶ ಪಡೆದರು. ಹೊಟ್ಟೆ ಪಾಡಿಗೆ ಕೆಲ ತಿಂಗಳು ಸಿನಿಮಾ ಮಂದಿರದಲ್ಲಿ ಟಿಕೆಟ್ ನೀಡುವ ಕೆಲಸ ಮಾಡಿದರು. ನಂತರ ಹೋಟೆಲ್ ಸಪ್ಲೈಯರ್ ಆಗಿ ಕೆಲಸ ಮಾಡಿದರು.  ಐಎಎಸ್ ಅಧಿಕಾರಿಯಾಗುವ ಮೊದಲು ಜೀವನದಲ್ಲಿ ಸಾಕಷ್ಟು ಕಷ್ಟ ಪಟ್ಟು ಛಲ ಬಿಡದೆ ತನ್ನ ಗುರಿಯನ್ನು ಮುಟ್ಟಿದ್ದಾರೆ. ಎಲ್ಲಾ ಸೌಕರ್ಯಗಳಿದ್ದರೂ ಸೋಮಾರಿತನ ಹೊದ್ದು ಮಲಗುವ ,ಬೀದಿ ಸುತ್ತುತ್ತಾ ಅಪ್ರಯೋಜಕರಾದ ಸಾವಿರಾರು ಯುವಕರಿಗೆ ಜಯ್ ಗಣೇಶ್  ರಂತಹವರು ಮಾದರಿಯಾಗಬೇಕೆ ಹೊರತು ಯಾವುದೋ ಸಿನಿಮಾದ ಹೀರೋ ಅಥವಾ ಹೀರೋಯಿನ್ ಗಳಲ್ಲ ಅಲ್ಲವೆ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

No comments: