ಆಶಾದಾಯಕ ಆರ್ಥಿಕ ಪ್ರಗತಿ.
ನೆರೆಯ ಶ್ರೀಲಂಕಾ, ಮತ್ತು ಪಾಕಿಸ್ತಾನ ದೇಶಗಳಲ್ಲಿ ಹಣದುಬ್ಬರ ಮಿತಿಮೀರಿ ಆ ದೇಶಗಳ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ
ವಿಶ್ವದ ಬಹುತೇಕ ದೇಶಗಳು ಆರ್ಥಿಕ ಹಿಂಜರಿತದ ಭೀತಿಯಿಂದ ಬಳಲುತ್ತಾ , ಜಗತ್ತಿನ ಕೆಲ ದೈತ್ಯ ಕಂಪನಿಗಳು ಉದ್ಯೋಗ ಕಡಿತ ಮಾಡುವ ಈ ದಿನಗಳಲ್ಲಿ ಭಾರತದ ಜಿ ಡಿ ಪಿ ಏರಿಕೆಯ ಗತಿ ದಾಖಲಿಸಿರುವುದು ಭಾರತದ ಮತ್ತು ಜಗತ್ತಿನ ಪಾಲಿಗೆ ಇದು ಆಶಾದಾಯಕ ಸಂಗತಿಯಾಗಿದೆ.
ಭಾರತದ ಅರ್ಥವ್ಯವಸ್ಥೆಯು ಜನವರಿ ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡ 6.1ರಷ್ಟು ಬೆಳವಣಿಗೆ ಕಂಡಿದೆ. ಇದರಿಂದಾಗಿ ದೇಶದ ಅರ್ಥವ್ಯವಸ್ಥೆಯು 2022-23ನೆಯ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆಯು ಶೇ 7.2ರಷ್ಟು ಅದಂತಾಗಿದೆ. ತನ್ಮೂಲಕ ಜಗತ್ತಿನಲ್ಲಿ ಅತಿ ಹೆಚ್ಚು ಜಿ ಡಿ ಪಿ ಇರುವ ದೇಶವಾಗಿದೆ ಹೊರಹೊಮ್ಮಿದೆ.ಇದೇ ವೇಳೆಯಲ್ಲಿ ಬಲಿಷ್ಠ ಆರ್ಥಿಕತೆ ಎಂದೇ ಹೆಸರಾದ ಅಮೆರಿಕ4%, ಚೀನಾ 3%. ಜಿಡಿಪಿ ಬೆಳವಣಿಗೆ ದಾಖಲಿಸಿ ಮೂರನೆ ಸ್ಥಾನಕ್ಕೆ ಕುಸಿದಿದೆ.
ಕೋವಿಡ್ ನಂತರ ಹಲವಾರು ಜಾಗತಿಕ ಸವಾಲುಗಳ ನಡುವೆಯೂ
2021-22ರಲ್ಲಿ ದೇಶದ ಜಿಡಿಪಿ ಶೇ 9.1ರಷ್ಟು ಬೆಳವಣಿಗೆ ಸಾಧಿಸಿತ್ತು.
ಕೃಷಿ, ತಯಾರಿಕೆ, ಗಣಿಗಾರಿಕೆ, ಹಾಗೂ ನಿರ್ಮಾಣ ವಲಯಗಳಲ್ಲಿನ ಉತ್ತಮ ಬೆಳವಣಿಗೆಯು ಒಟ್ಟು ಬೆಳವಣಿಗೆಯು ನಿರೀಕ್ಷೆಗೆ ಮೀರಿದ ಮಟ್ಟವನ್ನು ತಲುಪುವಲ್ಲಿ ಕೊಡುಗೆ ನೀಡಿವೆ.
ಈ ಪ್ರಮಾಣದ ಬೆಳವಣಿಗೆಯ ಪರಿಣಾಮವಾಗಿ ದೇಶದ ವ್ಯವಸ್ಥೆಯ ಗಾತ್ರವು 3.3 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಅಲ್ಲದೆ, ಇದು ಮುಂದಿನ ಕೆಲವು ವರ್ಷಗಳಲ್ಲಿ ಅರ್ಥ ವ್ಯವಸ್ಥೆಯ ಗಾತ್ರವನ್ನು 5 ಟ್ರಿಲಿಯನ್ ಡಾಲರ್‌ಗೆ ಬೆಳೆಸುವುದಕ್ಕೆ ಭೂಮಿಕೆ ಸಜ್ಜುಮಾಡಿ ಕೊಟ್ಟಂತೆ ಆಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದ ಅರ್ಥ ವ್ಯವಸ್ಥೆಯು ಮಾರ್ಚ್ ತ್ರೈಮಾಸಿಕದಿಂದ ವೇಗವಾಗಿ ಬೆಳವಣಿಗೆ ಮುಖ್ಯ ಅರ್ಥ ಕಾಣುತ್ತಿದೆ ಎಂಬುದನ್ನು ಜಿಡಿಪಿ ಅಂಕಿ- ಅಂಶಗಳು ಹೇಳುತ್ತಿವೆ ಎಂದು ತಜ್ಞರು. ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ .
ಕಚ್ಚಾವಸ್ತುಗಳ ಬೆಲೆ ಕಡಿಮೆ ಆಗುತ್ತಿರುವ ಈ ದಿನಗಳಲ್ಲಿ ಕಚ್ಚಾ ತೈಲದ ಬೆಲೆ ತಗ್ಗಿದೆ. ಇದು ಸಹ ಆರ್ಥಿಕ ಚೇತರಿಕೆಗೆ ಕಾರಣವಾಗಿದೆ.
ಜಿಡಿಪಿಯ ಬೆಳವಣಿಗೆಯ ಜೊತೆಯಲ್ಲಿ ಕೆಲ ಸವಾಲುಗಳನ್ನು ಸಹ ನಾವು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕಿದೆ. ಹಣದುಬ್ಬರ ನಿಯಂತ್ರಣಕ್ಕೆ ಬರಬೇಕಿದೆ. ಜಿಡಿಪಿಗೆ ಸೇವಾ ವಲಯದಷ್ಟೇ ಕೊಡುಗೆ ಸಲ್ಲಿಸಲು ಕೃಷಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ರೈತರ ಆದಾಯವನ್ನು ದ್ಬಿಗುಣಗೊಳಿಸಲು ಕ್ರಮಕೈಗೊಂಡರೆ ಹಾಗೂ ಎಲ್ಲಾ ಮೂರು ವಲಯಗಳ ಆರ್ಥಿಕ ಚಟುವಟಿಕೆಗಳನ್ನು ಇನ್ನೂ ಉತ್ತೇಜನ ನೀಡುವ ಉಪಕ್ರಮಗಳನ್ನು ಜಾರಿಗೆ ತಂದದ್ದೇ ಆದರೆ ಭಾರತವು 5 ಟ್ರಿಲಿಯನ್ ಆರ್ಥಿಕತೆ ಹೊಂದಿದೆ ದೇಶವಾಗಿ ಅಭಿವೃದ್ಧಿ ಹೊಂದುವುದರಲ್ಲಿ ಸಂದೇಹವಿಲ್ಲ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು
No comments:
Post a Comment