ಪಕ್ಷಿಲೋಕ ...
*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*
ಶನಿವಾರದ ಶಾಲಾ ಕರ್ತವ್ಯ ಮುಗಿಸಿಕೊಂಡು ಮನೆಗೆ ಹೊರಡುವಾಗ ಆತ್ಮೀಯರು ಮತ್ತು ಕಲಾವಿದರಾದ ಕೋಟೆ ಕುಮಾರ್ ರವರು ಸಿಹಿಜೀವಿ ನಿಮಗೊಂದು ಹೊಸ ಲೋಕ ತೋರಿಸುವೆ ಬನ್ನಿ ಎಂದರು. ಕುತೂಹಲದಿಂದ ಅವರನ್ನು ಹಿಂಬಾಲಿಸಿದೆ .ಬೈಕ್ ತುಮಕೂರಿನ ರವೀಂದ್ರ ಕಲಾನಿಕೇತನ ದ ಮುಂದೆ ನಿಂತಿತು.ಯಾವುದೋ ಕಲಾಕೃತಿಗಳನ್ನು ತೋರಿಸುವರು ಎಂಬ ನನ್ನ ಊಹೆ ಸುಳ್ಳಾಯಿತು. ಒಳಗೆ ಕಾಲಿಟ್ಟಾಗ ಅನಾವರಣಗೊಂಡಿದ್ದು "ಪಕ್ಷಿ ಲೋಕ "
ಚಿತ್ಕಲಾ ಫೌಂಡೇಷನ್ ಹಾಗೂ ರವೀಂದ್ರ ಕಲಾನಿಕೇತನ ಚಿತ್ರಕಲಾ
ಮಹಾವಿದ್ಯಾಲಯ, ಆರ್.ಟಿ.ನಗರ, ತುಮಕೂರು. ಇವರ ಸಹಯೋಗದಲ್ಲಿ
ಆಯೋಜಿಸಿರುವ ಛಾಯಾಚಿತ್ರ ಪ್ರದರ್ಶನ ನಮ್ಮ ಮನಸೆಳೆಯಿತು.
'ಪರಿಸರದ ಉಳಿವಿಗಾಗಿ ಪಕ್ಷಿಗಳ ಸಂರಕ್ಷಣೆ ಅತ್ಯಗತ್ಯ "ಎಂಬ ಮಹೋನ್ನತ ಗುರಿಯನ್ನು ಹೊಂದಿರುವ ಈ ಪ್ರದರ್ಶನ ಪರಿಸರದ ಕಾಳಜಿ ಮತ್ತು ಪಕ್ಷಿಗಳ ಸೌಂದರ್ಯ ಮತ್ತು ಅವುಗಳ ಜೀವನಕ್ರಮದ ಬಗ್ಗೆ ನಮಗೆ ಉತ್ತಮ ಮಾಹಿತಿ ನೀಡುತ್ತದೆ.
ಹೆಮ್ಮಿಗೆ ಮೋಹನ್ ಹಾಗೂ ವಿ .ಎಸ್. ದೇಸಾಯಿ ರವರು ಜಂಟಿಯಾಗಿ ಈ ಪಕ್ಷಿ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದಾರೆ.
ಹೆಮ್ಮಿಗೆ ಮೋಹನ್ ರವರು
ಹಾಸನ ಜಿಲ್ಲೆಯ ಮಲೆನಾಡಿನ ಊರು ಹೆಮ್ಮಿಗೆಯವರು.ಪಶ್ಚಿಮ ಘಟ್ಟದ ಸೆರಗಿನಂತಿರುವ ಹಮ್ಮಿಗೆಯ ಪರಿಸರ ಪಕೃತಿ ಸೌಂದರ್ಯ, ವೈವಿಧ್ಯತೆಯ ಮರಗಳು , ಪ್ರಾಣಿ, ಪಕ್ಷಿ, ಕೀಟಗಳನ್ನು ಕ್ಯಾಮರಾದಲ್ಲಿ ಮೋಹನ್ ಅವರು ಹಿಡಿದಿಟ್ಟಿರುವುದೇ ವಿಶೇಷ. ಹಾಸನ ಜಿಲ್ಲಾ ಸಹಕಾರ ಬ್ಯಾಂಕ್, ಮಲೆನಾಡು ಅಭಿವೃದ್ಧಿ ಪಾಲಕರಾಗಿ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಅದ್ಯಕ್ಷರಾಗಿ ಗೌರವ ವನ್ಯಜೀವಿ ಪರಿಪಾಲಕರಾಗಿ ಅತ್ಯುತ್ತಮ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ.
ಅವರೊಂದಿಗೆ ಛಾಯಾಚಿತ್ರ ಪ್ರದರ್ಶನದಲ್ಲಿ ಗಮನ ಸೆಳೆಯುವ ಚಿತ್ರಗಳ ಕ್ಲಿಕ್ಕಿಸಿದವರು ಬಿ ಎಸ್ ದೇಸಾಯಿ ರವರು.
ವಿಜಯಪುರ ಜಿಲ್ಲೆಯ ತಾಳಿಕೋಟೆ ಮೂಲದವರಾದ ಇವರು ಹಾಸನ ಜಿಲ್ಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಚಿತ್ರಕಲಾವಿದರಾಗಿ, ಕಲೆ ಮತ್ತು ಸಾಂಸ್ಕೃತಿಕ ಸಂಘಟನಾಕಾರರಾಗಿ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುವಾಗಿ ಸಮಾಜದಲ್ಲಿ ಸುಮಧುರ ಬಾಂಧವ್ಯದ ಬೆಸುಗೆಯಾಗಿ ಕ್ಯಾಮರಾದ ಮುಖಾಂತರ ಲಕ್ಷಾಂತರ ಪಕ್ಷಿಗಳ ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಮತ್ತು ಪ್ರದರ್ಶಿಸಿದ್ದಾರೆ.
ಈ ಇಬ್ಬರೂ ಕಲಾಕಾರರ ಕಲಾಕೃತಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.
ತುಮಕೂರು ಡಯಟ್ ನ ವೃತ್ತಿ ಶಿಕ್ಷಣ
ಉಪನ್ಯಾಸಕರಾದ ಟಿ ಶ್ರೀನಿವಾಸ ಮೂರ್ತಿ ರವರು ನಮ್ಮ ಜೊತೆಯಲ್ಲಿ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿ ಹೀಗೆ ಅಭಿಪ್ರಾಯಪಟ್ಟಿದ್ದಾರೆ
"ಶ್ರೀಯುತ ದೇಸಾಯಿ ರವರ ಈ ವಿಶೇಷ ಛಾಯಾಗ್ರಾಹಕ ಹವ್ಯಾಸ ನಿಜವಾಗಲೂ ಎಲ್ಲರನ್ನು ಬೆರೆಗು ಮಾಡುವಂತದ್ದು.
ನಿಜವಾದ ಛಾಯಾಗ್ರಾಹಕ ವೃತ್ತಿಯವರು, ಛಾಯಾಗ್ರಹಣದ ಬಗ್ಗೆ ಆಸಕ್ತಿ ಇರುವಂತಹವರು, ಕಲಾವಿದರು ಮತ್ತು ನೋಡುವಂತ ಕಲಾ ಆಸಕ್ತಿಯುಳ್ಳವರು ಎಲ್ಲರಿಗೂ ಬೆರಗಾಗುವಂತಹ ಹಾಗೂ ವಿವಿಧ ಆಯಾಮಗಳಲ್ಲಿ ಅದರಲ್ಲೂ ವಿಶೇಷವಾಗಿ ಪಕ್ಷಿಗಳ ಛಾಯಾಚಿತ್ರಗಳನ್ನು ಅವರ ಕ್ಯಾಮರಾದಲ್ಲಿ ಸೆರೆ ಹಿಡಿದಿರುವುದು ಅವರ ವಿಶೇಷ ಪ್ರಕೃತಿಯ ಆಸಕ್ತಿ ಎಂದರೆ ತಪ್ಪಾಗಲಾರದು ಸ್ನೇಹಿತರೆ. ಶ್ರೀಯುತ ಸಿ ಜಿ ವೆಂಕಟೇಶ್ವರ ಅವರ ಅಭಿಪ್ರಾಯದಂತೆ ಎಲ್ಲರನ್ನು ಪ್ರಕೃತಿಯಲ್ಲಿ ತೇಲಾಡುವಂತೆ ಮಾಡಿರುವುದು ಅವರ ಕ್ಯಾಮೆರಾ ಕೈಚಳಕನ ಘಮ್ಮತ್ತು. ನಾವೆಲ್ಲರೂ ಹಾಗೂ ನಮ್ಮ ಸ್ನೇಹಿತರು ಹಾಗೂ ಕುಟುಂಬದವರೆಲ್ಲರೂ ಬಂದು ನೋಡಬಹುದಾದ ಸುಂದರ ಛಾಯಾಚಿತ್ರಗಳ ಪ್ರದರ್ಶನ ಇದಾಗಿದೆ... ಶ್ರೀಯುತ ದೇಸಾಯಿ ರವರಿಗೆ ಶುಭವಾಗಲಿ ಎಲ್ಲರಿಗೂ ಪ್ರದರ್ಶನದ ಬಗ್ಗೆ ಮಾಹಿತಿಯನ್ನು ನೀಡಿ ನೋಡಲು ವೀಡಿಯೋ ಮೂಲಕ ಆಹ್ವಾನ ನೀಡುವ ಕಲಾವಿದರಾದ ಶ್ರೀ ಕೋಟೆ ಕುಮಾರ್ ರವರ ಪ್ರಯತ್ನ ಶ್ಲಾಘನೀಯ " ಎಂದರು..
ಆತ್ಮೀಯರೆ ನೀವು ಸಹ ಪಕ್ಷಿ ಲೋಕದಲ್ಲಿ ವಿಹರಿಸುವ ಮನಸ್ಸಾದರೆ
2022ರ ನವೆಂಬರ್ 02ರಿಂದ ನವೆಂಬರ್ 10ರವರೆಗೆ
ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 05 ರವರೆಗೆ ಹೋಗಿ ವೀಕ್ಷಿಸಲು ಅವಕಾಶವಿದೆ. ಇನ್ನೇಕೆ ತಡ ಹೊರಡಿ ಪಕ್ಷಿ ಲೋಕದಲ್ಲಿ ಒಂದು ಸುತ್ತು ಹಾಕಿ ಬನ್ನಿ...
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.
No comments:
Post a Comment