ವೈಫಲ್ಯಗಳಿಲ್ಲದೇ ಸಾಫಲ್ಯ ಕಾಣುವುದು ಬಹುಶಃ ಕನಸಿನಲ್ಲಿ ಅಥವಾ ಮೂರ್ಖರ ನಿಘಂಟಿನಲ್ಲಿ ಮಾತ್ರ. ವೈಫಲ್ಯಗಳು ನಮ್ಮ ಸಾಮರ್ಥ್ಯಕ್ಕೆ ಸವಾಲೊಡ್ಡುತ್ತವೆ .ಆ ಸವಾಲುಗಳನ್ನು ಧೈರ್ಯದಿಂದ ಸ್ವೀಕರಿಸಿ ಮುನ್ನುಗ್ಗಲು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಪರೋಕ್ಷವಾಗಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತವೆ ಎಂದರೆ ತಪ್ಪಾಗಲಾರದು.
ಇನ್ನೂ ಕೆಲವೊಮ್ಮೆ ಈ ವೈಫಲ್ಯಗಳು ಮಾನವ ಸಹಜವಾದ ನಮ್ಮ ಅಹಂ ಮೇಲೆ ಪೆಟ್ಟು ನೀಡಿ ತಲೆಯ ಮೇಲೆ ಒಂದು ಮೊಟಕಿ ನಮ್ಮ ವ್ಯಕ್ತಿತ್ವ ಉತ್ತಮ ಪಡಿಸಲೂ ಸಹಾಯಕವಾಗುತ್ತವೆ .
ಒಟ್ಟಿನಲ್ಲಿ ಸಾಫಲ್ಯದ ಸೌಧಕ್ಕೆ ವೈಫಲ್ಯಗಳೆಂಬ ಇಟ್ಟಿಗೆಗಳೆ ಬುನಾದಿ ಕಲ್ಲುಗಳು . ನಮಗೆ ಪಾಠ ಕಲಿಸುವ ಅಂತಹ ವೈಫಲ್ಯಗಳಿಗೆ ಧನ್ಯವಾದಗಳ ಹೇಳುತ್ತಾ ಸಾಗಬೇಕಿರುವುದು ಅಪೇಕ್ಷಣೀಯ. ನಮ್ಮ ವೈಫಲ್ಯಗಳಿಗೆ ಕುಂದದೇ ಸಾಫಲ್ಯದೆಡೆಗೆ ಹೆಜ್ಜೆ ಹಾಕೋಣ ನಮ್ಮ ಬದುಕನ್ನು ಹಸನು ಮಾಡಿಕೊಳ್ಳೋಣ .
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment