ನನ್ನ ನೆಚ್ಚಿನ ಸ್ವತಂತ್ರ ಹೋರಾಟಗಾರ ನೇತಾಜಿ!
ಹೆಸರಲ್ಲೇ ನೇತಾರನ ಗುಣ ಹೊಂದಿರುವ ಸುಭಾಷ್ ಚಂದ್ರ ಬೋಸ್ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು. ದೇಶದ ಸ್ವತಂತ್ರ ಪಡೆಯಲು ಸಣ್ಣ ಮಟ್ಟದ ತ್ಯಾಗ ಮತ್ತು ಬದ್ದತೆ ಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಲು ಗೀವ್ ಮಿ ಬ್ಲಡ್ ಐ ವಿಲ್ ಗೀವ್ ಯು ಇಂಡಿಪೆಂಡನ್ಸ್ ಎಂದು ಗರ್ಜಿಸಿದ ಧೀರ ನೇತಾಜಿ ನಮ್ಮ ಸುಭಾಷ್.
ನೇತಾರನಿಗಿರಬೇಕಾದ ಗುಣಗಳನ್ನು ಹುಟ್ಟಿನಿಂದಲೇ ಪಡೆದುಕೊಂಡು ಬಂದ ಸುಭಾಷ್ ರವರ ಸಂಘಟನಾ ಚಾತುರ್ಯ ಕಂಡು ಇಂಗ್ಲೀಷರು ಕೂಡಾ ಬೆಚ್ಚುತ್ತಿದ್ದರು.
ಪಾರ್ವಡ್ ಬ್ಲಾಕ್ ಸಂಘಟನೆಯ ಮೂಲಕ ದೇಶಾದ್ಯಂತ ಸ್ವಾಭಿಮಾನ ಸ್ವತಂತ್ರ ಮತ್ತು ಸ್ವಾವಲಂಬನೆಯ ಕಿಚ್ಚು ಹತ್ತಿಸಿದರು .
"ದಿಲ್ಲಿ ಚಲೋ "ಎಂಬ ಘೋಷಣೆಯೊಂದಿಗೆ ಸಾಮಾನ್ಯರಲ್ಲಿ ಸ್ವಾತಂತ್ರ್ಯ ಜ್ಯೋತಿಯನ್ನು ಹಚ್ಚಿದರು, ಅದು ದೇಶಾದ್ಯಂತ ಬಹಳ ಯಶಸ್ವಿಯಾದ ಚಳುವಳಿಗಳಲ್ಲಿ ಒಂದಾಯಿತು.
ದೇಶಾದ್ಯಂತ ಸ್ವತಂತ್ರ ಹೋರಾಟದ ಪ್ರೇರಣೆ ನೀಡಿದ ನೇತಾಜಿರವರು ವಿದೇಶದಲ್ಲೂ ಸಂಘಟನೆಗೆ ತೊಡಗಿದರು, ಶತೃವಿನ ಶತೃ ನಮ್ಮ ಮಿತ್ರ ಎಂಬಂತೆ ನಮ್ಮ ಶತೃಗಳಾದ ಆಂಗ್ಲರ ವಿರೋಧಿಗಳಾದ ಜಪಾನ್ ಮತ್ತು ಜರ್ಮನಿಯ ದೇಶಗಳ ಸಹಾಯ ಪಡೆದು "ಆಜಾದ್ ಹಿಂದ್ ಪೌಜ್" ಎಂಬ ಸೇನೆ ಕಟ್ಟಿದರು , ಮಹಿಳಾ ಸಬಲೀಕರಣದ ತತ್ವಗಳನ್ನು ಅಂದೇ ಬೆಂಬಲಿಸಿದ್ದ ನೇತಾಜಿರವರು ಆಜಾದ್ ಹಿಂದ್ ಪೌಜ್ ನಲ್ಲಿ ಮಹಿಳಾ ವಿಭಾಗ ಪ್ರಾರಂಭಿಸಿ ,ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್ ರವರಿಗೆ ಅದರ ನೇತೃತ್ವ. ವಹಿಸಿದ್ದರು,
ಅಂಡಮಾನ್ ನಿಕೋಬಾರ್ ದ್ವೀಪಗಳು ಮತ್ತು ನಾಗಾಲ್ಯಾಂಡ್ ಪ್ರದೇಶದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಸುಭಾಷ್ ರವರು 1945ರಲ್ಲೇ ಭಾರತಕ್ಕೆ ಸ್ವತಂತ್ರ ತಂದುಕೊಡುವ ಭರವಸೆ ನೀಡಿದರು, ಆದರೆ ನಿಗೂಢ ರೀತಿಯಲ್ಲಿ ಅವರು ಕಣ್ಮರೆಯಾದ ರೀತಿ ಕೋಟ್ಯಾಂತರ ಭಾರತೀಯ ಮನಗಳಿಗೆ ಆಘಾತ ನೀಡಿತು.
ಇಂದಿನ ಪೀಳಿಗೆಯು ಸುಭಾಷ್ ರಂತಹ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕಿದೆ ಅವರ ತತ್ವ ಆದರ್ಶ ಗಳನ್ನು ಅಳವಡಿಸಿಕೊಳ್ಳ ಬೇಕಿದೆ ,ಇದೇ ನಾವು ಆ ಹಿರಿಯ ಚೇತನಕ್ಕೆ ನೀಡುವ ಗೌರವವಾಗಿದೆ .
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment