05 September 2020

ಕೊರೊನಾ ಕಾಲದ ಶಿಕ್ಷಕರ ಸವಾಲುಗಳು ಮತ್ತು ಕಾರ್ಯಗಳು


 

  • ಕರೋನ‌ ಕಾಲದ ಶಿಕ್ಷಕರ ಸವಾಲುಗಳು ಮತ್ತು ಕಾರ್ಯಗಳು


ಕರೋನ ಸಾಂಕ್ರಾಮಿಕ ರೋಗವು ದೇಶಾದ್ಯಂತ ಹರಡಲು ಆರಂಬಿಸಿದಾಗ  ಶೈಕ್ಷಣಿಕ ವರ್ಷದ ಕಡೆಯ ಭಾಗದಲ್ಲಿ ಪರೀಕ್ಷೆಗಳು ಬಾಕಿ ಇದ್ದವು, ಮಕ್ಕಳ ಹಿತದೃಷ್ಟಿಯಿಂದ ಒಂದರಿಂದ ಒಂಭತ್ತನೆಯ ತರಗತಿಯ ಎಲ್ಲಾ ಮಕ್ಕಳನ್ನು ಅವರ ಹಿಂದಿನ ಕಿರುಪರೀಕ್ಷೆ ಮತ್ತು ಇತರೆ ಸಾಧನೆಗಳನ್ನು ಗಣನೆಗೆ ತೆಗೆದುಕೊಂಡು ಮುಂದಿನ ತರಗತಿಗೆ ತೇರ್ಗಡೆ ಮಾಡಲಾಯಿತು. ಎಸ್ಸೆಸ್ಸೆಲ್ಲಿ ಪರೀಕ್ಷೆ ಮಾಡಲು ಸರ್ಕಾರ ನಿರ್ಧಾರ ಮಾಡಿದಾಗ ನಾನು ಲಾಕ್ಡೌನ್ ಸಮಯದಲ್ಲಿ   ನಮ್ಮ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಾಟ್ಸಪ್ ಗುಂಪು ಮಾಡಿ, ನನ್ನ ವಿಷಯದ ಬಗ್ಗೆ ಮಾರ್ಗದರ್ಶನ ಮಾಡುವುದರ ಜೊತೆಗೆ ಕರೋನ ರೋಗದ ಬಗ್ಗೆ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಮಕ್ಕಳಿಗೆ ಧೈರ್ಯ ತುಂಬಿದೆ. ಇದೇ ಸಮಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರು ,ಮತ್ತು ಜಿಲ್ಲಾ ತರಬೇತಿ ಕೇಂದ್ರದ ಸಹಯೋಗದಲ್ಲಿ ಮಕ್ಕಳಿಗೆ ಜಿಲ್ಲಾ ಮಟ್ಟದ  ಫೊನ್ ಇನ್ ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ವಿಷಯದ ಸಂಪನ್ಮೂಲ ಶಿಕ್ಷಕನಾಗಿ ಪಾಲ್ಗೊಂಡು ವಿಷಯದ ಬಗ್ಗೆ  ಮಕ್ಕಳಿಗೆ ಇರುವ ಅನುಮಾನಗಳನ್ನು ಬಗೆಹರಿಸಿ ಪರೀಕ್ಷೆ ಎದುರಿಸಲು ಧೈರ್ಯ ತುಂಬಲಾಯಿತು. ಜಿಲ್ಲಾ ಪಂಚಾಯತ್ ,ಸಾರ್ವಜನಿಕ ಶಿಕ್ಷಣ ಇಲಾಖೆ, ಮತ್ತು ಡಯಟ್ ಸಹಯೋಗದಲ್ಲಿ  ಎಸ್ಸೆಸ್ಸೆಲ್ಸಿ  ಮಕ್ಕಳಿಗೆ ಐದು ನಿಮಿಷಗಳ ಪುನರ್ಮನನ ತರಗತಿ ವೀಡಿಯೋ ಮಾಡಲು ಸಂಪನ್ಮೂಲ ಶಿಕ್ಷಕನಾಗಿ ಪಾಲ್ಗೊಂಡು, ಮಕ್ಕಳ ಕಲಿಕೆಯು ಉತ್ತಮವಾಗಿ ಆಗಲು ಆ ವೀಡಿಯೋಗಳು ಜಿಲ್ಲೆಯ ಎಲ್ಲಾ ಮಕ್ಕಳಿಗೆ ಹಂಚಲಾಯಿತು.

ಪ್ರಗತಿ ಟಿ ವಿ ಯಲ್ಲಿ ಹಮ್ಮಿಕೊಂಡ ಹತ್ತನೇ ತರಗತಿಯ ಮಕ್ಕಳಿಗೆ ಮಾರ್ಗದರ್ಶನ ನೀಡುವ ಪೋನ್ ಇನ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಂಪನ್ಮೂಲ ಶಿಕ್ಷಕನಾಗಿ ಕಾರ್ಯ ನಿರ್ವಹಣೆ ಮಾಡಿದೆ.ಇದರ ಪರಿಣಾಮವಾಗಿ ನನ್ನ ವಿಷಯದಲ್ಲಿ ನೂರಕ್ಕೆ ನೂರು ಮಕ್ಕಳು ಉತ್ತಿರ್ಣರಾದರು .ನಮ್ಮ ಶಾಲೆಯು ಶೇಕಡ97 ಫಲಿತಾಂಶ ದಾಖಲಿಸಿತು ನಮ್ಮ ಜಿಲ್ಲೆಯ ಫಲಿತಾಂಶ ಸಹ ಉತ್ತಮವಾಯಿತು.


ರಜೆಯ ಅವಧಿಯಲ್ಲಿ ಮಕ್ಕಳಿಗೆ ಉಚಿತವಾಗಿ ಅಕ್ಕಿ ಗೋದಿ, ಅಡಿಗೆ ಎಣ್ಣೆ,ಹಾಲಿನ ಪುಡಿ ಮುಂತಾದ ಪರಿಕರಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಂಡು, ಮುನ್ನೆಚ್ಚರಿಕೆಯ ಕ್ರಮ ಕೈಗೊಂಡು ಪೋಷಕರ ಸಭೆ ನಡಸಿ

ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಿಸಲಾಯಿತು.

ಪ್ರಸ್ತುತ ಶಾಲೆಗೆ ರಜೆ ಇರುವ ಈ ಸಮಯದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ವಿದ್ಯಾಗಮ ಕಾರ್ಯಕ್ರಮದ ಅಂಗವಾಗಿ  ಮಕ್ಕಳಿಗೆ ಪಾಠ ಮಾಡಲು ವಾಟ್ಸಪ್ ಗುಂಪು ಮಾಡಿ ಮಾರ್ಗದರ್ಶನ ಮಾಡಲಾಗಿದೆ. ಗೂಗಲ್ ಮೀಟ್ ತಂತ್ರಜ್ಞಾನದ ಸಹಾಯದಿಂದ ಆನ್ಲೈನ್ ಪಾಠ ಆರಂಭಿಸಲಾಯಿತು. ಮೊಬೈಲ್ ಇಲ್ಲದ ಮಕ್ಕಳ ಮನೆಯ ಸಮೀಪದ ದೇವಾಲಯದ ಬಳಿ ,ಮರದ ಕೆಳಗೆ , ತರಗತಿ ನಡೆಸುತ್ತಿದ್ದೇವೆ.ತುಮಕೂರು ತಾಲ್ಲೂಕಿನ ಕೆಸರಮಡು, ಕೌತಮಾರನಹಳ್ಳಿ , ಕ್ಯಾತಸಂದ್ರ ಮುಂತಾದ ಸ್ಥಳಗಳಲ್ಲಿ ಮಕ್ಕಳಿಗೆ ಪ್ರತಿದಿನ ಪಾಠ ಮಾಡಿ ಅಭ್ಯಾಸ ಹಾಳೆನೀಡಿ ನೋಟ್ಸ್ ನೀಡಿ ಮಕ್ಕಳು ನಿರಂತರವಾಗಿ ಕಲಿಕೆಯ ವಾತಾವರಣದಲ್ಲಿ ಇರುವಂತೆ ಮಾಡುತ್ತಿರುವೆವು.


ಒಟ್ಟಿನಲ್ಲಿ ಕರೋನ ಸಂಕಷ್ಟದ ಕಾಲದಲ್ಲಿ ಶಿಕ್ಷಕರಿಗೂ ಸವಾಲಿನ ಕಾಲವಾಗಿದೆ ಈ ಸವಾಲುಗಳನ್ನು ನಮ್ಮ ಶಿಕ್ಷಕ ಮಿತ್ರರು ಸ್ವೀಕರಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ , ಜೊತೆಗೆ ಮಕ್ಕಳಿಗೆ ಈ ಸಂದಿಗ್ಧ ಕಾಲದಲ್ಲಿ ನಾಲ್ಕಕ್ಷರ ಕಲಿಸಿದ ಆತ್ಮ ತೃಪ್ತಿ ಇದೆ .ಶಿಕ್ಷಕನಾಗಿರುವುದಕ್ಕೆ ಹೆಮ್ಮೆ ಇದೆ


ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು


ಸಿ ಜಿ ವೆಂಕಟೇಶ್ವರ

ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಕ್ಯಾತಸಂದ್ರ

ತುಮಕೂರು


No comments: