ಸರ್ಕಾರಿ ಪ್ರೌಢಶಾಲೆ ಕ್ಯಾತಸಂದ್ರ ಟಾಲ್ಪ್ ತರಬೇತಿ ಕೇಂದ್ರ
TALP ಇಂಡಕ್ಷನ್ 1
ತರಬೇತಿಯ ಮೊದಲ ದಿನದ ವರದಿ
ವರದಿಗಾರರು.
ಸಿ ಜಿ ವೆಂಕಟೇಶ್ವರ
ಸಮಾಜ ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ.
ಕ್ಯಾತಸಂದ್ರ
ತುಮಕೂರು
ಗಣಕಯಂತ್ರವ ಮುಟ್ಟದವನ
ಇಲಿಯನೇ ಹಿಡಿಯದವನ
ಕೀಲಿಮಣೆಯನು ಕುಟ್ಟದವನ
ಕರೆದು ಉದ್ದನೆಯ ಪೆನ್ ಡ್ರೈವ್
ನಲ್ಲಿ ಹೊಡೆಯೆಂದ " ಸಿಹಿಜೀವಿ"
ಇಂದು ಕಂಪ್ಯೂಟರ್ ಜ್ಞಾನವಿರದಿರೆ ನಾವು ಅನಕ್ಷರಸ್ಥರೇನೊ ಎಂದು ಅನಿಸುತ್ತದೆ ಆದ್ದರಿಂದ ಸಿಹಿಜೀವಿಯ ವಚನದಂತೆ ನಾವೆಲ್ಲರೂ ಕಂಪ್ಯೂಟರ್ ಕಲಿಯುವುದು ಅಗತ್ಯ ಎಂದು ಲೇಟ್ ಆಗಾದ್ರೂ ಲೇಟೆಸ್ಡ್ ಎಂಬಂತೆ ,ಸರ್ಕಾರಿ ಪ್ರೌಢಶಾಲೆ ಕ್ಯಾತಸಂದ್ರ ಇಲ್ಲಿ ನಡೆಯುವ TALP ಇಂಡಕ್ಷನ್ ೧ ತರಬೇತಿಗೆ ಹಾಜರಾದೆವು.
ತರಬೇತಿಯ ಆರಂಭವಾದಂತೆ
ಹೊರಗಡೆ ಬೀಳುತ್ತಿದ್ದವು
ತುಂತುರು ಹನಿಗಳು|
ಈ ವರದಿ ಮಾಡಲು
ನಾನು ಅಲ್ಲಲ್ಲಿ ಬಳಕೆ
ಮಾಡುವೆನು ಸಿಹಿಜೀವಿಯ ಹನಿಗಳು||
ನಾನು ವರದಿ ಮಾಡುವಾಗ ಏನಾದರೂ kB ಅಷ್ಟು ತಪ್ಪು ಮಾಡಿದರೆ ದಯಮಾಡಿ ನಿಮ್ ಯಾವುದಾದರೂ ಚಿಕ್ಕ ಪೋಲ್ಡರ್ ನಲ್ಲೋ ,ಡ್ರೈವ್ ನಲ್ಲೋ ಹಾಕ್ಕೋಳ್ರಿ.!
ನಮ್ಮ ವಿಷಯಗಳಲ್ಲಿ
ನಮ್ಮ ತರಗತಿಯಲ್ಲಿ
ನಾವೇ ರಾಜ, ರಾಣಿಯರು
ನಮ್ಮದೇ ಕಾರು ಬಾರು|
ಈ ಕಂಪ್ಯೂಟರೆ ತಲೆಗೋಗ್ತಾ ಇಲ್ಲ
ಹೇಳ್ಕೊಡಿ ಒಂಚೂರು||
ಎಂದು ವಿದೇಯ ವಿದ್ಯಾರ್ಥಿಗಳಂತೆ ಬಂದು ಡೆಸ್ಕ್ ಮೇಲೆ ಸಾಮಾಜಿಕ ಅಂತರದಲ್ಲಿ ಕುಳಿತೆವು.
ನಮ್ಮಲ್ಲಿ ಇದ್ದರೆ ಸೂಕ್ತ ಸಿದ್ದತೆ
ಮಾಡುವ ಕೆಲಸದಲ್ಲಿ ಬದ್ದತೆ ||
ಖಂಡಿವಾಗಿಯೂ ಹಚ್ಚಬಹುದು
ಕಂಪ್ಯೂಟರ್ ಸಾಕ್ಷರತೆಯ ಹಣತೆ|`
ಅಚ್ಚುಕಟ್ಟಾಗಿ ಉದ್ಘಾಟನಾ ಸಮಾರಂಭ ಆಯೋಜಿಸಿದ್ದು ಸಂಪನ್ಮೂಲ ವ್ಯಕ್ತಿಗಳ ಬದ್ದತೆಗೆ ಮತ್ತು ಸಿದ್ದತೆಗೆ ಹಿಡಿದ ಕನ್ನಡಿಯಾಗಿತ್ತು.
ನಮ್ಮ ಮುಖ್ಯ ಶಿಕ್ಷಕರು
ಟಾಲ್ಪ್ ತರಬೇತಿ
ಕಾರ್ಯಕ್ರಮದ ನೋಡಲ್|
ತರಬೇತಿಯ ಯಶಸ್ವಿಗೆ
ಸಹಕಾರ ನೀಡಲು
ಹಿಂದೆ ಮುಂದೆ ನೋಡಲ್ಲ||
ಕಂಪ್ಯೂಟರ್ ಸಾಕ್ಷರತೆಯ ಕುರಿತು ಮಾತನಾಡುತ್ತಾ "ಕೋವಿಡ್ ಕಾಲದಲ್ಲಿ ಪ್ರತಿಯೊಬ್ಬ ಶಿಕ್ಷಕರು ಕಂಪ್ಯೂಟರ್ ಕಲಿತು, ಉತ್ತಮ ಬೋದನೆಗೆ ಸಿದ್ದರಾಗಿ ಅದಕ್ಕೆ ಬೇಕಾದ ಸಕಲ ಸಹಾಯ ಮತ್ತು ಮಾರ್ಗದರ್ಶನ ನೀಡಲು ನಾನು ಸಿದ್ದ "ಎಂದು ಕ್ಯಾತಸಂದ್ರ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಎಸ್ .ಆರ್ .ಪ್ರಮೀಳಾ ಮೇಡಂ ರವರು ಶಿಕ್ಷಕರನ್ನು ಹುರಿದುಂಬಿಸಿದರು.
ಸಂಪನ್ಮೂಲ ಶಿಕ್ಷಕಿಯಾದ ಚರಿತಾ ಚಕೋರಿ ಮೇಡಂ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ "ಕಂಪ್ಯೂಟರ್ ಕಲಿಕೆ ಕೇವಲ ಅಸೈನ್ಮೆಂಟ್ಗೆ ಸೀಮಿತವಾಗದೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಲಿ "ಎಂದರು .
ಹಿರಿಯ ಸಹಶಿಕ್ಷಕರಾದ ಹೆಚ್. ಎಲ್ .ಜಗದೀಶ್ ರವರು "ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಕಂಪ್ಯೂಟರ್ ಕಲಿತು ಶಾಲಾ ತರಗತಿಯ ಕೋಣೆಗಳಲ್ಲಿ ಬಳಸುವೆವು "ಎಂದು ಶಿಭಿರಾರ್ಥಿಗಲ ಪರವಾಗಿ ಭರವಸೆ ನೀಡಿದರು.
ತರಬೇತಿಯ ಅವಧಿಯಲ್ಲಿ
ಸರ್ಕಾರ ಶಿಭಿರಾರ್ಥಿಗಳಿಗೆ
ನೀಡುವುದಂತೆ ಭತ್ಯೆ
ದಿನಕ್ಕೆ ನೂರು|
ಇಂತಹ ಅಗತ್ಯವಾದ ಜ್ಞಾನ
ಸುಲಭವಾಗಿ ಸಿಗದು
ನಾವೇ ದಿನಕ್ಕೆ ಕೊಟ್ಟರೂ ಸಾವಿರಾರು||
ಉದ್ಘಾಟನಾ ಸಮಾರಂಭದ ನಂತರ ತರಬೇತಿಯನ್ನು ಮುಂದುವರೆಸಿದರು ಸಂಪನ್ಮೂಲ ಶಿಕ್ಷಕರು.
ಇವರು ರಾಜ್ಯ ಮತ್ತು
ರಾಷ್ಟ್ರ ಮಟ್ಟದ ಸಂಪನ್ಮೂಲ
ಶಿಕ್ಷಕರ (CC)ಕಾರ್ಬನ್ ಕಾಪಿ||
ಸುಲಭವಾಗಿ ಕಂಪ್ಯೂಟರ್
ಹೇಳಿಕೊಡ್ತಾರೆ ಕುಡಿಯುತ್ತಾ ಕಾಫಿ||
ಮೊದಲು ಕಂಪ್ಯೂಟರ್ ಬಿಡಿ ಭಾಗಗಳನ್ನು ಪರಿಚಯ ಮಾಡುತ್ತಾ ಹೊಸ ಕಲಿಕಾರ್ಥಿಗಳಿಗೆ ಧೈರ್ಯ ಹೇಳಿದರು ಸಂಪನ್ಮೂಲ ವ್ಯಕ್ತಿಗಳಾದ C C ಮೇಡಂ
ಅವರು ಚಂದಿರನಿಗಿಂತ
ತಂಪು
ಸುಲಲಿತವಾಗಿ ಕೀಬೋರ್ಡ್
ಮೇಲೆ ಹರಿದಾಡುವುದು ಅವರ ಕರ|
ಅವರೇ ನಮ್ಮ ಸಂಪನ್ಮೂಲ ಶಿಕ್ಷಕರು
ಚಂದ್ರ ಶೇಖರ||
ಇವರು ಟಾಲ್ಪ್ ಸಂಪನ್ಮೂಲ
ವ್ಯಕ್ತಿಗಳಾದ ಮೇಡಂ C C||
ಯಾರ್ ಬೇಕಾದ್ರೂ ಕಲಿತಾರೆ
ಕಂಪ್ಯೂಟರ್ ಯಾಕೆಂದರೆ
ಹೆಳ್ಕೊಡ್ತಾರೆ ಬಿಡ್ಸಿ ಬಿಡ್ಸಿ||
ಕಂಪ್ಯೂಟರ್ ಭಾಗಗಳ ಬಗ್ಗೆ ಪರಿಚಯಿಸಿದ ನಂತರ ನಮ್ಮ ಇ ಮೇಲ್ ಸೃಷ್ಟಿ ಮಾಡಲು ತಿಳಿಸಿಕೊಟ್ಟು ಗೂಗಲ್ ಡ್ರೈವ್ ಬಗ್ಗೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಅಂದರು
ಮೊದಲಿದ್ದ ಮೂವತ್ತೆಂಟು
ಅಸೈನ್ಮೆಂಟ್ ಗಳಿಂದ
ಇಳಿಸಿದ್ದಾರೆ ಈಗ ಕೇವಲ
ಹದಿನಾರು|
ಕೊನೆಯ ಬೆಂಚಿನ ಶಿಬಿರಾರ್ಥಿ
ಗೊನಗಿದರು
ಇನ್ನೂ ಕಡಿಮೆ ಮಾಡಿ
ಕೊಡಬಹುದಿತ್ತು ಕೇವಲ ಆರು||
ಅಸೈನ್ಮೆಂಟ್ ಗಳು ನಾವು ಕಲಿಯಲು ಉತ್ತಮ ಸಾಧನಗಳು ಕಂಪ್ಯೂಟರ್ ಬಳಸುತ್ತಾ ಹೋದಂತೆ ಅದರ ಆಳ ,ಅಗಲ ತಿಳಿಯುತ್ತದೆ ನಮ್ಮ ಕಲಿಕೆ ದೃಢೀಕರಣಗೊಳ್ಳುತ್ತದೆ . ಎಲ್ಲಾ ಅಸೈನ್ಮೆಂಟ್ ಗಳನ್ನು ಗಮನವಿಟ್ಟು ಮಾಡೋಣ.
ಟೀ ಕೊಡಲು ತರಬೇತಿ
ಕೋಣೆಯೊಳಗೆ ಬಂದರು
ಮದ್ದಮ್ಮ ತಾಯಿ|
ಮನದಲ್ಲೆ ಧನ್ಯವಾದಗಳ
ಹೇಳಿದರು ಎಲ್ಲರೂ
ಸಿಹಿ ಮಾಡಿದ್ದಕ್ಕೆ ಬಾಯಿ||
ಟೀ ವಿರಾಮದ ನಂತರ ಕಂಪ್ಯೂಟರ್ ಲ್ಯಾಬ್ ಗೆ ಕರೆದುಕೊಂಡು ಹೋದ ಸಂಪನ್ಮೂಲ ವ್ಯಕ್ತಿಗಳು ಕಂಪ್ಯೂಟರ್ ಆನ್ ಮಾಡಲು ಹೇಳಿದರು . ನಯವಾದ ನೆಲದಲ್ಲಿ ನಡೆಯಲು ಬರದವರನ್ನು ಅಮೇಜಾನ್ ಕಾಡಿನಲ್ಲಿ ಚಾರಣ ಹೋಗಲು ಹೇಳಿದಂತೆ ಕೆಲವರು ಸಂಪನ್ಮೂಲ ಶಿಕ್ಷಕರತ್ತ ನೋಡಿದರು .
ಕ್ರಮೇಣ ಎಲ್ಲರೂ ಕಂಪ್ಯೂಟರ್ ಆನ್ ಮಾಡಿ ಈ ಮೇಲ್ ಲಾಗಿನ್ ಆಗಿ ,ಗೂಗಲ್ ಡ್ರೈವ್ ಓಪನ್ ಮಾಡಿ ಪೋಲ್ಡರ್ ಮಾಡಿದರು .
ಇಲ್ಲಿ ಓಪನ್ ಮಾಡಬೇಕು
ಡ್ರೈವ್ , ಪೋಲ್ಡರ್ |
ನಾನು ನನ್ನ ಮನೆಯಲ್ಲಿ
ತಿರಿವಿಯೂ ಹಾಕುವುದಿಲ್ಲ
ಕ್ಯಾಲೆಂಡರ್||
ಎಂದು ಮೂಲೆಯಲ್ಲಿ ಯಾರೊ ಗೊನಗಿದ್ದು ಕೆಲವರಿಗೆ ಮಾತ್ರ ಕೇಳಿತು.
ಮಧ್ಯಾಹ್ನದ ಊಟದ ವಿರಾಮದ ನಂತರ ,ನಮ್ಮ ಹೊಟ್ಟೆ ತುಂಬಿದ ನಂತರ ಗೂಗಲ್ ಪಾರ್ಮ್ ತುಂಬಲು ಹೇಳಿದರು . ಮಧ್ಯಾಹ್ನದ ಮೊದಲ. ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗ ಶ್ರೀ ಚಂದ್ರಶೇಖರ ಸರ್ ರವರು ಮೊದಲ ಅಸೈನ್ಮೆಂಟ್ ಮಾಡುವ ರೀತಿಯನ್ನು ವಿವರಿಸಿದರು.
ಒಂದು ವಸ್ತುವನ್ನು ವಿವಿಧ ಆಯಾಮಗಳಲ್ಲಿ ಫೋಟೋ ತೆಗೆದು ಒಂದು ಪೋಲ್ಡರ್ ಗೆ ಹಾಕಿ ಅದನ್ನು ಗೂಗಲ್ ಡ್ರೈವ್ ಗೆ ಸೇವ್ ಮಾಡುವ ರೀತಿಯನ್ನು ತಿಳಿಸಿದರು.
ನಾವು ಶಿಬಿರಾರ್ಥಿಗಳು ನಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಫೋಟೋಗಳನ್ನು ತೆಗೆದು ಪೋಲ್ಡರ್ ಗೆ ಅಪ್ಲೋಡ್ ಮಾಡುವಲ್ಲಿ ಮಗ್ನರಾಗಿದ್ದೆವು ಸೂರ್ಯ ನಿಧಾನವಾಗಿ ಪಶ್ಚಿಮದಲ್ಲಿ ಅಸ್ತಂಗತನಾದದ್ದು ಗಮನಕ್ಕೆ ಬಂದು ನಮ ಸಿಸ್ಟಮ್ ಗಳನ್ನು ಶಟ್ಡೌನ್ ಮಾಡಿ ಮನೆಯ ಕಡೆ ಹೊರಟೆವು .
ಕಡೆಯದಾಗಿ ಒಂದು ಮಾತು ವೃತ್ತಿಭಾಂಧವರೆ
ಮನುಷ್ಯನ
೧ ಆಯಷ್ಯ,
೨ ಕರ್ಮ
೩ಹಣ,
೪ವಿದ್ಯೆ,
೫ ಮರಣ
ಈ ಐದು ಗರ್ಭದಲ್ಲಿ ಇರುವಾಗ ನಿಶ್ಚಯವಾಗಿರುತ್ತದೆ. ಅದೇ ಪ್ರಕಾರವಾಗಿ ನಾವು ಶಿಕ್ಷಕರಾಗಿ ಕಾರ್ಯ ಮಾಡುವುದು ಹಾಗೂ ಈ ತರಬೇತಿಯಲ್ಲಿ ಭಾಗವಹಿಸುತ್ತಿರುವುದು ಸಹ ಪೂರ್ವ ನಿಶ್ಚಿತವಾಗಿದೆ . ಆದ್ದರಿಂದ ಈ ತರಬೇತಿಯನ್ನು ಕ್ರಮಬದ್ಧವಾಗಿ ಪಡೆದು ಅದನ್ನು ನಮ್ಮ ಮಕ್ಕಳಿಗೆ ತಲುಪಿಸೋಣ.
ನಾವು ಕಾಲ ಕಾಲಕ್ಕೆ
ಆಗುತ್ತಿರಬೇಕು ಅಪ್ಡೇಟ್|
ಇಲ್ಲವಾದರೆ ಸಮಾಜದಲ್ಲಿ
ನಾವಾಗಿಬಿಡುವೆವು ಔಟ್ ಡೇಟ್||
ಸ್ನೇಹಿತರೆ ಇದು ಮಾಹಿತಿ ತಂತ್ರಜ್ಞಾನದ ಯುಗ ಆಧುನಿಕ ಯುಗ , ಇಂತಹ ಸಂಧರ್ಭದಲ್ಲಿ ದಿನಕ್ಕೊಂದು ಹೊಸ ಸಂಶೋಧನೆಗಳು ನಡೆಯುತ್ತಾ ಕೃತಕ ಬುದ್ಧಿಮತ್ತೆ ನಮಗೆ ಸವಾಲಾಗುವ ಕಾಲ ಸನಿಹವಿದೆ ಆದ್ದರಿಂದ ಪ್ರತಿದಿನವೂ ನಾವು ಹೊಸತು ಕಲಿಯುವುದು ಇಂದಿನ ಅವಶ್ಯಕತೆ, ಅದರಲ್ಲೂ ಶಿಕ್ಷಕರಾದ ನಮಗಂತೂ ಬಹಳ ಅಗತ್ಯ.
ಬನ್ನಿ ಕಲಿಯೋಣ , ಕಲಿಸೋಣ ಬೆಳೆಯೋಣ
ಸರ್ವರಿಗೂ ನಮಸ್ಕಾರಗಳು
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment