ಸ್ವಾಸ್ಥ್ಯ ಸಮಾಜ ನಿರ್ಮಿಸೋಣ
ಕರ್ನಾಟಕದಲ್ಲಿ ಮಕ್ಕಳ ಅಪೌಷ್ಟಿಕತೆ ಗಣನೀಯವಾಗಿ ಕಡಿಮೆಯಾಗಿರುವ ವರದಿ ನೋಡಿ ತುಂಬಾ ಸಂತಸವಾಯಿತು.ಇಪ್ಪತ್ತೊಂದನೇ ಶತಮಾನದಲ್ಲಿ ನಾವಿದ್ದರೂ ವಿವಿಧ ಕ್ರಾಂತಿಗಳಾದ ಹಸಿರು ಕ್ರಾಂತಿ, ನೀಲಿಕ್ರಾಂತಿ,ಹಳದಿಕ್ರಾಂತಿ,ಶ್ವೇತ ಕ್ರಾಂತಿ ಮಾಡಿರುವೆವವು ಎಂದು ಕೊಚ್ಚಿಕೊಂಡರೂ ಇಂದು ಜಗದಲ್ಲಿ ಕೋಟ್ಯಾಂತರ ಜನರು ಬಡತನದಲ್ಲಿ ಇರುವುದು ವ್ಯವಸ್ಥೆಯನ್ನು ಮತ್ತು ಅಭಿವೃದ್ಧಿಯನ್ನು ಅಣಕಿಸಿದಂತೆ. ಅದರಲ್ಲೂ ಏನೂ ಅರಿಯದ ಕಂದಮ್ಮಗಳು ಅಪೌಷ್ಟಿಕತೆಯ ಕೂಪಕ್ಕೆ ಸಿಕ್ಕು ತಮ್ಮದಲ್ಲದ ತಪ್ಪಿನಿಂದ ವಿವಿಧ ರೋಗಗಳಿಂದ ಬಳಲುತ್ತಿರುವ ಮತ್ತು ಮರಣಹೊಂದುತ್ತಿರುವ ಚಿತ್ರಣ. ನಮ್ಮ ಕಣ್ಣ ಮುಂದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಶಾಕಿರಣ ಎಂಬಂತೆ ಕರ್ನಾಟಕದಲ್ಲಿ ಈ ವರ್ಷ ಅಪೌಷ್ಟಿಕತೆಯ ಪ್ರಮಾಣ 0.33 ಕಡಿಮೆಯಾಗಿದೆ. ನೋಡಲು ಈ ಆನುಪಾತ ಚಿಕ್ಕದು ಎಂದು ಕಂಡರೂ 2015 ರಲ್ಲಿ ರಾಜ್ಯದ ಅಪೌಷ್ಟಿಕತೆಯ ಮಕ್ಕಳ ಸಂಖ್ಯೆ 21652 ರಿಂದ ಈ ವರ್ಷದ ಹೊತ್ತಿಗೆ 11265 ಕ್ಕೆ ಕಡಿಮೆಯಾಗಿದೆ ಇದು ಗಮನಾರ್ಹವಾದ ಬೆಳವಣಿಗೆ ಈ ದಿಸೆಯಲ್ಲಿ ಕಾರ್ಯಪ್ರವತ್ತವಾದ ಸರ್ಕಾರಗಳು ಸರ್ಕಾರೇತರ ಸಂಘ ಸಂಸ್ಥೆಗಳು, ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಅಭಿನಂದನಾರ್ಹರು. ಅನ್ನಭಾಗ್ಯ,ಕ್ಷೀರಭಾಗ್ಯ,ಸೃಷ್ಟಿ ಯೋಜನೆ, ವೈದ್ಯಕೀಯ ವೆಚ್ಚ ಯೋಜನೆಗಳ ಫಲ ಈ ಸಕಾರಾತ್ಮಕ ಬೆಳವಣಿಗೆ.ಆದರೂ ಬೆಳಗಾವಿಯಲ್ಲಿ1249 ಮಕ್ಕಳು, ಬಳ್ಳಾರಿಯಲ್ಲಿ 1134 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ವರದಿ ಅತಂಕ ತರುವ ಅಂಶವಾಗಿದೆ.ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಅಪೌಷ್ಟಿಕತೆಯ ಹೋಗಲಾಡಿಸಲು ಹೆಚ್ಚಿನ ಅನುದಾನವನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹ. ಇದರ ಜೊತೆಗೆ ಸಮರ್ಪಕವಾಗಿ ಯೋಜನೆಯ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾದರೆ ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆಯು ಕಡಿಮೆಯಾಗುತ್ತದೆ ತನ್ಮೂಲಕ ಸ್ವಾಸ್ಥ್ಯ ಜನತೆ ಸ್ವಾಸ್ಥ್ಯ ಸಮಾಜದ ಪರಿಕಲ್ಪನೆಯನ್ನು ಸಾಕಾರ ಮಾಡಬಹುದು.
ಸಿ ಜಿ ವೆಂಕಟೇಶ್ವರ
No comments:
Post a Comment