ಪತ್ರಿಕಾ ಲೇಖನ
ಚುನಾವಣಾ ಆಯೋಗದ
ಸ್ವಾಗತಾರ್ಹ ಕ್ರಮ
ಚುನಾವಣಾ ಆಯೋಗವು ಚುನಾವಣೆಗಳಲ್ಲಿ
ಪೇಸ್ ರೆಕಗ್ನಿಷನ್ ತಂತ್ರಜ್ಞಾನದ ಮೂಲಕ ಮತದಾರರ ಗುರುತಿಸುವ ಬಗ್ಗೆ ಯೋಚನೆ ಮಾಡಿರುವುದು ಸ್ವಾಗತಾರ್ಹ. ಈ ರೀತಿ ಮಾಡುವುದರಿಂದ ನಿಜವಾದ ಮತದಾರರ ಗುರುತು ಪತ್ತೆ ಮಾಡಬಹುದು. ಜೊತೆಗೆ ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆ ನಡೆಸಲು ಸಹಕಾರಿಯಾಗುತ್ತದೆ. ಕೆಲವು ಮತಗಟ್ಟೆಗಳಲ್ಲಿ ಬೇರೆಯವರು ಬಂದು ತಮ್ಮದಲ್ಲದ ಮತ ಚಲಾಯಿಸಲು ಮತಗಟ್ಟೆಯ ಸಿಬ್ಬಂದಿಯ ಜೊತೆಗೆ ಅನವಶ್ಯಕ ವಾಗ್ವಾದ ಮಾಡುವುದು ಕಂಡುಬರುತ್ತದೆ. ಪೇಸ್ ರೆಕಗ್ನಿಶನರ ತಂತ್ರಾಂಶದ ಸಹಾಯದಿಂದ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹುದು. ಆದರೆ ಇದಕ್ಕೆ ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯನ್ನು ನೀಡಬೇಕು ಜೊತೆಗೆ ದೋಷ ರಹಿತವಾದ ಯಂತ್ರಗಳ ಸರಬರಾಜು ಮಾಡಬೇಕು. ಇಲ್ಲದಿದ್ದರೆ ಊದುವುದು ಕೊಟ್ಟು ಒದರುವುದು ತಂದರು ಎಂದಾಗುತ್ತದೆ.
*ಸಿ.ಜಿ.ವೆಂಕಟೇಶ್ವರ*

No comments:
Post a Comment