*ಎಲ್ಲಿ ಹೋದವು ಆ ದಿನಗಳು*
ಎಲ್ಲಿಹೋದವು ಆ ದಿನಗಳು
ಎಲ್ಲಿ ನೋಡಿದರೂ ದಾವಂತದ ಯಾಂತ್ರಿಕ ಬದುಕಿನ ತೋರಿಕೆಗಳು
ಬೆಳ್ಳಿ ಚುಕ್ಕಿ ಬಂತು ಏಳೋ
ಕಂದ ಎಂದು ಎಬ್ಬಿಸಿ ನಿತ್ಯ ಕರ್ಮ ದೊಂದಿಗೆ ಕರ್ಮ ಆರಂಬಿಸಿ
ಗಂಗಾ ಯಮುನ ನದಿಗಳ ನೆನೆದು
ಸ್ನಾನವ ಮಾಡಿ ಬ್ರಾಹ್ಮಿ ಮುಹೂರ್ತದಿ ಜಪ ತಪ ಪೂಜೆಗಳು ಅಂದು.
ಇಂದು
ನೇಸರ ನೆತ್ತಿಗೆ ಬಂದರೂ
ಏಳು ಎಂದು ಹೇಳಲು ಹಿಂಜರಿವ ಪಾಲಕರು ಎದ್ದರೂ ಕರಾಗ್ರೆ ವಸತೇ...
ಬದಲಾಗಿ ಕರದಲಿ ಜಂಗಮವಾಣಿ ಹಿಡಿದು ಮುಖ ತೊಳೆಯದೇ ಮುಖಪುಟಕೆ ಹಾತೊರೆವ ನವ
ಪೀಳಿಗೆಗಳು.
ಗೋಧೂಳಿ ಸಮಯದಿ ಮನೆ ಕಸವ
ತೆಗೆದು ದೀಪ ಮುಡಿಸಿ
ಕಾಯಕನಿರತ ಗೃಹಿಣಿಯರು
ಭಾಗವತ ರಾಮಾಯಣ ಕಥೆಗಳ
ಹೇಳುವ ಅಜ್ಜಿಗಳು ಕುತೂಹಲದಿಂದ ಕೇಳುವ ಮಕ್ಕಳು .ನೈತಿಕತೆ ಮೌಲ್ಯಗಳು ಬೆಳೆಯಲು ಪೂರಕ ಚಟುವಟಿಕೆಗಳು.
ಇಂದಿನ ಬಹುತೇಕ ಡ್ಯಾಡಿ ಮಮ್ಮಿಗಳಿಗೆ
ಮೊಬೈಲೇ ಸ್ವರ್ಗ ಮಕ್ಕಳ ಕೈಗೂ
ಅದನ್ನಿತ್ತು ಬೆಳಕು ನೀಡುವ ಬದಲು
ಕತ್ತಲಾಗಿ ಮಾಡಿ
ಮೌಲ್ಯಗಳ ಸಾರುವ ಕಥೆಗಳ ಹೇಳುವ
ಅಜ್ಜ ಅಜ್ಜಿಯರನು ವೃದ್ದಾಶ್ರಮಕೆ ತಳ್ಳಿ
ಅದೇ ಪುಟ್ಟ ಗೌರಿನೋಡುತಾ ಗಟ್ಟಿ ಮೇಳ ಬಾರಿಸುತಾ , ಮನೆಯೊಂದು ಮೂರುಬಾಗಿಲು ಮಾಡಲು ಸಜ್ಜಾಗಿರುವ ಆದರ್ಶ ಜನಗಳು.?
ಎಲ್ಲಿಹೋದವು ಆ ದಿನಗಳು?
ಎಲ್ಲಿ ನೋಡಿದರೂ ದಾವಂತದ ಯಾಂತ್ರಿಕ ಬದುಕಿನ ತೋರಿಕೆಗಳು .
*ಸಿ ಜಿ ವೆಂಕಟೇಶ್ವರ*
No comments:
Post a Comment