ಜಗ *ಗಜ಼ಲ್*
ಹುಚ್ಚನಂತೆ ನಾನು ಕಾಯತಿರುವ ತಾಣಕ್ಕಾದರೂ ಬಾರೆ
ಇಚ್ಚೆಯಲಿ ನೀನೇ ಹೇಳಿದ ಜಾಗಕ್ಕಾದರೂ ಬಾರೆ
ನೀನಿರುವೆಡೆ ಜಗ ಮಗ ಬೆಳಕು ನಕ್ಷತ್ರಗಳ ಹೊಳಪು
ಕತ್ತಲಾಗಿಹ ಹೃದಯದ ದೀಪ ಹಚ್ಚಲಾದರೂ ಬಾರೆ
ದಿನ ಕಳೆದು ದಿನಪ ಹೋಗಿ ಚಂದಮ ಬಂದ
ತಿಂಗಳ ಬೆಳಕಲ್ಲದರೂ ವರ್ಷದ ಜೊತೆಗಾದರೂ ಬಾರೆ
ಸಾಗರದ ತಟದಲ್ಲಿ ಸಾಗರ ದಷ್ಟು ಆಸೆ ಹೊತ್ತ ನಿರೀಕ್ಷೆ
ದಾರಿ ಕಾಯುತಿಹೆ ಏಕಾಂತದಿ ಈ ಕಾಂತನ ಮುದ್ದಿಸಲಾದರೂ ಬಾರೆ
ಸೀಜೀವಿಯ ನೋಡದೆ ನೀ ನಿಲ್ಲುವಳಲ್ಲ ಒಲವಿನ ನಲ್ಲೆ
ನಿನ್ನ ನೋಡದೆ ನಾ ಹೇಗಿರಲಿ ಒಮ್ಮೆ ಸಂದಿಸಲಾದರೂ ಬಾರೆ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
No comments:
Post a Comment