*ಗಜ಼ಲ್45*
ಪರಹಿತ ಚಿಂತನೆ ಮಾಡುವುದು ಯಾರಿಗೂ ಬೇಕಿಲ್ಲ
ಆತ್ಮಸಾಕ್ಷಾತ್ಕಾರವೆಂಬ ವಿಸ್ಮಯ ಕಾಣುವುದು ಯಾರಿಗೂ ಬೇಕಿಲ್ಲ
ಕತ್ತಲಲಿ ನಮ್ಮ ನೆರಳು ಕೂಡ ಕಾಣದು ಗಾಡಂಧಕಾರದಲಿರುವರು
ಬೆಳಕ ಕಾಣುವ ದಾರಿ ಹುಡುಕುವುದು ಯಾರಿಗೂ ಬೇಕಿಲ್ಲ
ಅರಿಷಡ್ವರ್ಗದ ಬಂಧನದಲಿಹೆವು ನಾವು
ಜ್ಞಾನ. ಕರ್ಮ ಭಕ್ತಿ ಮಾರ್ಗದಿ ನಡೆಯುವುದು ಯಾರಿಗೂ ಬೇಕಿಲ್ಲ
ಸಾಲ ಮಾಡಿಯಾದರೂ ತುಪ್ಪ ತಿನ್ನಲು ಸಿದ್ದ
ಹಿಂದೆ ಮಾಡಿದ ಕರ್ಮಗಳ ಲೆಕ್ಕಹಾಕುವುದು ಯಾರಿಗೂ ಬೇಕಿಲ್ಲ
ಪರರು ಅಧಮರು ಅನೀತಿವಂತರು ಕೆಟ್ಟವರು
ತನ್ನ ತಟ್ಟೆಯಲಿ ಸತ್ತು ಬಿದ್ದಿಹ ಹೆಗ್ಗಣ ಎತ್ತಿಹಾಕುವುದು ಯಾರಿಗೂ ಬೇಕಿಲ್ಲ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments:
Post a Comment