*ಗಜ಼ಲ್*
ದಿಕ್ಕುಗಳನ್ನೇ ಅಂಬರ ಮಾಡಿಕೊಂಡ ದಿಟ್ಟ ಮುನಿಯ ಹೇಗೆ ಮರೆಯಲಿ
ಮುನಿಯದೇ ಮಾದರಿಯಾದ ಯತಿವರ್ಯರ ವಾಗ್ಜರಿಯ ಹೇಗೆ ಮರೆಯಲಿ
ಕಹಿ ಗುಳಿಗೆಯಲಿ ಸಿಹಿಯಾದ ಲೋಕ ಜ್ಞಾನ ಬೋಧನೆ
ಸಾವಿಗಂಜುವ ಜನರ ನಡುವೆ ಸಾವ ಸ್ವೀಕರಿಸಿದ ಸಲ್ಲೇಖನ ವ್ರತಧಾರಿಯ ಹೇಗೆ ಮರೆಯಲಿ
ಬಟ್ಟೆಗಳನ್ನು ಹಾಕಿಕೊಂಡು ಬೆತ್ತಲಾದವರು ನಾವುಗಳು
ಬಟ್ಟೆಯ ಧರಿಸದೇ ನಮಗೆಲ್ಲ ಬಟ್ಟೆಯ ತೋರಿದ ಬೆಳಕ ಕಿಡಿಯ ಹೇಗೆ ಮರೆಯಲಿ
ದೇಹಕ್ಕೆ ವಯಸ್ಸುಗುವುದು ಸಹಜ ಮನಸ್ಸು ಆತ್ಮಕ್ಕಲ್ಲ
ತರುಣರಾಗೇ ಮರಣವನು ಮೆಟ್ಟಿದ ಮುನಿಯ ಹೇಗೆ ಮರೆಯಲಿ
ಸಾಗರದಷ್ಟು ಆಸೆ ಆಕಾಂಕ್ಷೆಗಳ ಭಾರಕೆ ಹಗುರಾಗುತ್ತಿಲ್ಲ ಮನ
ಸೀಜೀವಿಯಂತವರ ಮೇಲೆ ಪ್ರಭಾವ ಬೀರಿದ ಯತಿಯ ಹೇಗೆ ಮರೆಯಲಿ
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*
No comments:
Post a Comment