*ಕಸ ಗುಡಿಸುವ ಹೆಂಗಸಿನ ಹಸರೇನು?*
ಇಂದು ಸಮಾಜದಲ್ಲಿ ಜನರ ಹಣ ಆಸ್ತಿ ಪಾಸ್ತಿ ಅವರ ವೇಷಭೂಷಣಗಳನ್ನು ನೋಡಿ ಬೆಲೆ ಕೊಡುವವರ ಸಂಖ್ಯೆ ಜಾಸ್ತಿ ಅದಕ್ಕೆ ಒಂದು ಘಟನೆ ಉದಾಹರಣೆ ನೀಡುವುದಾದರೆ ಒಮ್ಮೆ ಒಂದು ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಂದು ಲಿಖಿತ ಕ್ವಿಜ್ ಆಯೋಜನೆ ಮಾಡಲಾಗಿರುತ್ತದೆ ಅದರಲ್ಲಿ ಕೇಳುವ ಎಲ್ಲಾ ಇಪ್ಪತ್ತು ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸುವ ವಿದ್ಯಾರ್ಥಿಗಳಿಗೆ ಈ ಬಾರಿಯ ಅತ್ಯುತ್ತಮ ವಿದ್ಯಾರ್ಥಿ ಎಂದು ಘೋಷಣೆ ಮಾಡಲಾಗುತ್ತದೆ .ಎಲ್ಲಾ ವಿದ್ಯಾರ್ಥಿಗಳು ಬಹಳ ಕಾತರರಾಗಿ ನಿರೀಕ್ಷಿಸಲಾದ ಪರೀಕ್ಷೆ ಆರಂಭವಾಗಿ ಎಲ್ಲರೂ ಉತ್ತಮವಾಗಿ ಬರೆಯುತ್ತಿದ್ದರು ಕೊನೆಯ ಐದು ನಿಮಿಷದಲ್ಲಿ ಗುಸು ಗುಸು ಆರಂಭವಾಯಿತು " ಅದೇ ಆ ಕಪ್ಪು ಹೆಂಗಸು". ಎಂದು ಒಬ್ಬ ಎಂದರೆ "ಐವತ್ತು ವರ್ಷ ವಯಸ್ಸಿರಬಹುದು " ಎಂದ ಮತ್ತೊಬ್ಬ ವಿದ್ಯಾರ್ಥಿ" ಸರ್ ಕೊನೆ ಪ್ರಶ್ನೆ ಅಂಕ ಲೆಕ್ಕಕ್ಕೆ ಇದೆಯೇ? " ಎಂದು ಉಪನ್ಯಾಸಕರನ್ನು ಕೇಳಿದ ಹೌದು ಎಂದರು .ಕೊನೆ ಪ್ರಶ್ನೆ ಈಗಿತ್ತು " ನಿಮ್ಮ ಕೊಠಡಿಗಳನ್ನು ದಿನವೂ ಸ್ವಚಗೊಳಿಸುವ ಹೆಂಗಸಿನ ಹೆಸರೇನು?*" ಈ ಪ್ರಶ್ನೆ ಗೆ ಯಾರೂ ಸರಿಯಾಗಿ ಉತ್ತರ ನೀಡಲಿಲ್ಲ .
ನಮ್ಮ ಅಕ್ಕ ಪಕ್ಕದಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹಲವಾರು ಜನ ಕೆಲಸ ಮಾಡುತ್ತಾರೆ ಪ್ರತಿ ಕೆಲಸ ಅದರದೇ ಆದ ಘನತೆ ಹೊಂದಿರುತ್ತವೆ ನಮಗಾಗಿ ಯಾವುದೇ ಕೆಲಸ ಮಾಡುವ ಅವರ ಹೆಸರು ತಿಳಿದಿದ್ದರೆ ಒಳ್ಳೆಯ ದಲ್ಲವೆ ಕನಿಷ್ಠ ಅವರ ಸೇವೆಗೆ ಒಂದು ಧನ್ಯವಾದ ಅರ್ಪಿಸಿ ಅವರಲ್ಲಿ ಕಾಣುವ ಆನಂದ ಗಮನಿಸಿ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
*ಗೌರಿಬಿದನೂರು*
No comments:
Post a Comment