*ಯುವಕರು ಮತ್ತು ಉದ್ಯೋಗ*
ಇಂದಿನ ಯುವ ಜನತೆಯು ಎಷ್ಟೇ ಓದಿದರೂ ನಿರುದ್ಯೋಗದಿಂದ ಬಳಲುತಿರುತ್ತಾರೆ.ಇದಕ್ಕೆ ಹಲವಾರು ಕಾರಣಗಳಿವೆ, ಉದ್ಯೋಗದ ಕೊರತೆ ಇರಬಹುದು.ಕೆಲವೊಮ್ಮೆ ಉದ್ಯೋಗ ಲಬ್ಯವಿದ್ದರೂ ಈಗಿನ ಕೆಲ ಯುವಕರಲ್ಲಿ ಕೆಲಸ ಮಾಡುವ ಆಸಕ್ತಿಯು ಕಡಿಮೆ ಆಗಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ , ಹಾಗೂ ತಮ್ಮ ಭವಿಷ್ಯದ ಬಗ್ಗೆ ಕಾಳಜಿ ಇರದೆ ಇರುವುದು ಸಹ ಕಾರಣವಾಗಿರುತ್ತೆ. ಇದರ ನಡುವೆ ತಮ್ಮ ವಿಧ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗಗಳನ್ನು ಹುಡುಕುವುದರಲ್ಲೆ ಯುವಕರು ಕಾಲಹರಣ ಮಾಡುತ್ತಿದ್ದಾರೆ.
ಉದ್ಯೋಗಂ ಪುರುಷ ಲಕ್ಷಣಂ,ಎನ್ನುವುದು ಹಳೆಯದಾದ ಮಾತು ಈಗ ಉದ್ಯೋಗಂ ಮಾನವ ಲಕ್ಷಣಂ ಎನ್ನುವಂತಾಗಿದೆ ಪ್ರತಿಯೊಬ್ಬರೂ ಒಂದಲ್ಲ ಒಂದು ಕಾಯಕ ಮಾಡಿದರೆ ನಮ್ಮ ಬಾಳು ಹಸನಾಗುವುದು ಬಹಳ ಯುವಕರು ತಮಗೆ ಸಿಗುವ ಕೆಲಸಗಳಲ್ಲಿ ತೃಪ್ತಿಗೊಳ್ಳುವುದು ಬಿಟ್ಟು,ಬೇರೆ ಶಾಶ್ವತ ಉದ್ಯೋಗಿಗಳಿಗೆ ಪರದಾಡುತ್ತಾರೆ. ಇದು ತಪ್ಪಲ್ಲ ಆದರೆ ಕ್ರಮೇಣ ಕೆಲಸ ಮಾಡುತ್ತಾ ಹುನ್ನತ ಹುದ್ದೆಗಳ ಪಡೆದರೆ ಉತ್ತಮ
ಕೆಲ ಯುವಕರು ತಾವು ಎಷ್ಟೇ ಸಂದರ್ಶನದಲ್ಲಿ ಗ ಭಾಗವಹಿಸಿದರೂ ಕೂಡ ಕೆಲಸ ಸಿಗದೆ ಖಿನ್ನತೆಯಿಂದ ಬಳಲುತಿರುತ್ತಾರೆ, ಅದರ ಬದಲು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಇಂದಿಲ್ಲಾ ನಾಳೆ ನನ್ನ ಪ್ರಯತ್ನಕ್ಕೆ ಫಲ ಸಿಕ್ಕೆ ಸಿಗುತ್ತೆ ಅನ್ನೋ ಆತ್ಮ ಬಲ ಹೊಂದಿರಬೇಕು.
ಮರಳಿ ಯತ್ನ ಮಾಡು ಎಂಬಂತೆ ಸರ್ಕಾರಿ ಅಥವಾ ಖಾಸಗಿ ಯಾವದೇ ಕೆಲಸ ಮಾಡಲು ಸಿದ್ದರಿರಬೇಕು
ಇತ್ತೀಚಿಗೆ ಕೇಂದ್ರ ಸರ್ಕಾರ ಸ್ಕಿಲ್ ಇಂಡಿಯಾ ಮೇಕ್ ಇನ್ ಇಂಡಿಯಾ ಮುಂತಾದ ಕಾರ್ಯ ಕ್ರಮಗಳ ಮೂಲಕ ಯುವಕರು ಹೆಚ್ಚಾಗಿ ಕೆಲಸವನ್ನು ಪಡೆಯಲು ತರಬೇತು ನೀಡುತ್ತಿದೆ
ಮುದ್ರಾ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿಯಲ್ಲಿ ಸಾಲದ ನೆರವು ನೀಡುತ್ತಿದೆ ಇವನ್ನೆಲ್ಲಾ ಬಳಸಿಕೊಂಡು ನಮ್ಮ ಯುವ ಸಮೂಹ ಉದ್ಯೋಗ ಮಾಡಬೇಕು ತನ್ಮೂಲಕ ಭವ್ಯ ಭಾರತದ ನಿರ್ಮಾಣದ ಪಣ ತೊಡಬೇಕು
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments:
Post a Comment