*ನ್ಯಾನೋ ಕಥೆ*
*ಕೋರಿಕೆ*
ಕ್ಷುಲ್ಲಕ ಕಾರಣಕ್ಕೆ ರವಿಯ ಅತ್ತೆ ರವಿಯನ್ನು ಅಂದು ವಾಚಾಮಗೋಚರವಾಗಿ ಬೈದು ಹಬ್ಬಕ್ಕೆ ಬಂದ ಅಳಿಯ ಮಗಳನ್ನು ಮನೆಯಿಂದ ಓಡಿಸಿದ್ದರು .
ಅವರ ಊರಿಗೆ ಬಂದು, ಅಂದು ಸಂಜೆ ಅದೇ ಬೇಸರ ದಲ್ಲಿ ರವಿ ಮತ್ತು ಚಂದ್ರಿಕಾ ಊಟವಾದ ಬಳಿಕ ಮನೆಯ ಅಂಗಳದಲ್ಲಿ ಆಕಾಶ ನೋಡುತ್ತ ಮಲಗಿದ್ದರು ಇದ್ದಕ್ಕಿದ್ದಂತೆ ಒಂದು ನಕ್ಷತ್ರ ದೂರದವರೆಗೆ ಚಲಿಸಿ ಬಿದ್ದು ಹೋಯಿತು "ನಕ್ಷತ್ರ ಬೀಳುವುದು ಅಶುಭ ಸೂಚನೆಯಂತೆ" ಎಂದಳು ಚಂದ್ರಿಕಾ .ಅವಳ ಮಾತನ್ನು ಅಲ್ಲಗಳೆದ ರವಿ ."ನಕ್ಷತ್ರಗಳು ಬೀಳುವುದು ನೋಡುವುದು ಶುಭವಂತೆ ಅವುಗಳು ಬೀಳುವಾಗ ನಾವೇನಾದರೂ ಕೋರಿಕೊಂಡರೆ ಅದು ಈಡೇರುವುದಂತೆ "ಎಂದನು
ಬೆಳಿಗ್ಗೆ ಯಾರೋ ಬಂದು ಮನೆಬಾಗಿಲ ಬಡಿದಾಗ ಎಚ್ಚರವಾದ ದಂಪತಿಗಳಿಗೆ ದೂರದೂರಿನಿಂದ ಬಂದ ಯುವಕ ರವಿಯ ಅತ್ತೆಯ ಸಾವಿನ ವಿಷಯ ತಿಳಿಸಿದ
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*
No comments:
Post a Comment