*ಆನಂದಭಾಷ್ಪ* (ನ್ಯಾನೋ ಕಥೆ)
ಅಲ್ಲೆಲ್ಲ ಸ್ಪರ್ದೆಯ ವಾತಾವರಣ ಜನರಲ್ಲಿ ಕುತೂಹಲ ಯಾರು ಬಹುಮಾನ ಗಳಿಸಬಹುದು ಎಂಬ ಚರ್ಚೆ ,ಸುರೇಶನ ತಾಯಿಯು ಆತಂಕದಿಂದ ಕುಳಿತು ಇರೋ ಬರೋ ದೇವರನ್ನೆಲ್ಲಾ ಪ್ರಾರ್ಥನೆ ಮಾಡುತ್ತಿದ್ದರು ಕಾರಣ ಇಷ್ಟೇ ಮಗ ರಾಜ್ಯ ಮಟ್ಟದ ಗಾಯನ ಸ್ಪರ್ಧೆಯಲ್ಲಿ ನನ್ನ ಮಗ ಗೆಲ್ಲಲೇ ಬೇಕು ಏಕೆಂದರೆ ೧೫ ವರ್ಷಗಳ ಹಿಂದೆ ಶಾಲೆಯ ಸಂಗೀತ ಶಿಕ್ಷಕರಾದ ತಿಪ್ಪೇಸ್ವಾಮಿ ರವರು " ನಿನ್ನ ಮಗನಿಗೆ ಸಂಗೀತ ಬಾರದು ಸುಮ್ಮನೆ ಯಾಕೆ ಸಂಗೀತ ಪಾಠ ನಿಲ್ಲಸಿ ಬೇರೆ ಓದಿನ ಕಡೆ ಗಮನ ಹರಿಸಲು ಹೇಳಿ ಡಾಕ್ಟರ್ ಅಥವಾ ಇಂಜಿನಿಯರ್ ಆಗಬಹುದು "ಎಂದಿದ್ದು ಕಿವಿಯಲ್ಲಿ ಗುಯ್ ಗುಟ್ಟಿತು." ಈ ಸಾಲಿನ ರಾಜ್ಯಮಟ್ಟದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆವರು ಸರಸ್ವತಿ " ಎಂದು ಧ್ವನಿವರ್ಧಕದಲ್ಲಿ ಬಂದಾಗ ತಾಯಿಗೆ ಅತೀವ ನಿರಾಸೆ .ಮುಂದುವರೆದು "ದ್ವಿತೀಯ ಬಹುಮಾನ ಸುರೇಶ್ "ಎಂದಾಗ ಆ ತಾಯಿಯ ಆನಂದ ತಾಳಲಾರದೇ ಆನಂದಭಾಷ್ಪ ಉಕ್ಕಿ ಅಲ್ಲೇ ಕಣ್ಮುಚ್ಚಿದರು .
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
No comments:
Post a Comment