*ಸಮರಸವೇ ಜೀವನ*
ಬಾಳ ಪಯಣದಲಿ ನೂರಾರು ತಿರುವುಗಳು
ಜೀವಿಸಬೇಕು ನೀನು ಸಂತಸದಿ ಹಗಲಿರುಳು
ನಿಂದಕರಿಹರು ಹಂದಿಯಂತೆ ಜಗದಿ
ಅವರ ನಿಂದನೆ ಸ್ವೀಕರಿಸು ಮುದದಿ
ಕಾಲೆಳೆವರು ನೀ ಮೇಲೇರಿದರೆ ಇಲ್ಲಿ
ಸಾಧಿಸಿ ತೋರಿಸವರಿಗೆ ಜೀವನದಲ್ಲಿ
ಕಷ್ಟ ಕೋಟಲೆಗಳು ನೂರು ಇರಲಿ
ಇಷ್ಟ ಪಟ್ಟು ಬದುಕುವುದು ನೀ ಕಲಿ
ಎಲ್ಲರೊಳಗೊಂದಾಗಿ ಬಾಳಬೇಕು
ಸಮರಸವೇ ಜೀವನ ತಿಳಿಯಬೇಕು
ಮಿಡಿತವಿರಲಿ ಅಶಕ್ತ ಮನಗಳಿಗೆ
ತುಡಿತವಿರಲಿ ಹೊಸ ಕಲಿಕೆಗಳಿಗೆ
ದಯೆಯಿರಲಿ ಸಕಲ ಜೀವಗಳಲಿ
ಪರಿಸರದ ಬಗ್ಗೆ ಕಾಳಜಿಯಿರಲಿ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
No comments:
Post a Comment